ಪುಲ್ವಾಮಾ ದಾಳಿಯನ್ನು ಕಂಡಿಸಿ ಕೇಂದ್ರ ಸರಕಾರ ಪಾಕಿಸ್ತಾನದ ವಿರುದ್ಧ ಅನೇಕ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಲ್ಲದೇ ಮೋದಿಯವರ ರಾಜತಾಂತ್ರಿಕತೆಯ ಫಲವಾಗಿ ಪ್ರಪಂಚವೇ ಪಾಕಿಸ್ತಾನದ ವಿರುದ್ಧ ತಿರುಗಿ ಬಿದ್ದಿವೆ. ಭಾರತ ಪಾಕಿಸ್ತಾನಕ್ಕೆ ನೀಡಿದ್ದ ಪರಮಾಪ್ತ ರಾಷ್ಟ್ರ ಎಂಬ ಬಿರುದನ್ನೂ ಕಿತ್ತುಕೊಂಡ ನಂತರವಂತೂ ಪಾಕಿಸ್ತಾನದ ಪರಿಸ್ಥಿತಿ ಹೇಳತೀರದು. ಇದರ ಫಲವಾಗಿ ಭಾರತಕ್ಕೆ ಆಮದಾಗುತ್ತಿದ್ದ ಹಲವಾರು ವಸ್ತುಗಳು 200 % ತೆರಿಗೆಯನ್ನು ತೆರಬೇಕಾದ ಪರಿಸ್ಥಿತಿ ಉಂಟಾಗಿದೆ. ಇವುಗಳ ಹೊರತಾಗಿಯೂ ಭಾರತೀಯ ರೈತರು ವಿಶ್ವಾಸ ಗಾತುಕ ರಾಷ್ಟ್ರವಾದ ಪಾಕಿಸ್ತಾನಕ್ಕೆ ಟೊಮೇಟೊ ಸೇರಿದಂತೆ ಅನೇಕ ತರಕಾರಿಗಳನ್ನು ಇಲ್ಲೇ ಕೊಳೆತುಹೋದರೂ ಸರಿಯೇ ರಪ್ತು ಮಾಡುವುದಿಲ್ಲ ಎಂದು ತಿರ್ಮಾನ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿರಿ :ಕಿಸಾನ್ ಸಮ್ಮಾನ್ ಯೋಜನೆ ಇದು ನಿಮ್ಮ ಹಕ್ಕು: ನರೇಂದ್ರ ಮೋದಿ
ಭಾರತಿಯ ರೈತರ ಈ ತೀರ್ಮಾನದಿಂದಾಗಿ ಪಾಕಿಸ್ತಾನದಲ್ಲಿ ದಿನನಿತ್ಯದ ಆಹಾರ ಸಾಮಗ್ರಿಗಳ ಬೆಲೆಯಲ್ಲಿ ಭಾರಿ ಏರಿಕೆ ಉಂಟಾಗಿದೆ. ಇದರಿಂದ ಕಂಗೆಟ್ಟಿರುವ ಪಾಕಿಸ್ತಾನಿಯರು ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಹಿಡಿಶಾಪ ಹಾಕುತ್ತಿರುವುದಂತು ಸುಳ್ಳಲ್ಲ. ಈ ನಡುವೆ ಪಾಕಿಸ್ತಾನದ ನ್ಯೂಸ್ ರಿಪೋರ್ಟರ್ ಒಬ್ಬನು ಪಾಕಿಸ್ತಾನಕ್ಕೆ ಟೊಮೇಟೊ ಮಾರದಿರುವ ಭಾರತೀಯರ ನಿರ್ಧಾರವನ್ನು ಹಿಂತೆಗೆದುಕೊಳ್ಳದಿದ್ದರೆ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಈ ತಪ್ಪಿಗೆ ಕ್ಷಮೆ ಕೇಳಿ ಮತ್ತೆ ರಪ್ತುಮಾಡುವಂತೆ ಹೇಳಿದ್ದಾನೆ. ಇಲ್ಲದೆ ಹೋದರೆ ನಮ್ಮ ಪರಮಾಣು ಶಕ್ತಿಗಳು ಸ್ಟೋರ್ ಮಾಡಲು ಇಟ್ಟಿಲ್ಲ ಅವುಗಳನ್ನು ಪ್ರಯೋಗಿಸಬೇಕಾಗುತ್ತದೆ ಎಂದು ಹೇಳಿದ್ದಾನೆ. ಈ ವಿಡಿಯೋ ಈಗ ವೈರಲ್ ಆಗಿದ್ದು ಭಾರತೀಯರು ಬಿದ್ದು ಬಿದ್ದು ನಗುತ್ತಿದ್ದಾರೆ.
ಇದನ್ನೂ ಓದಿರಿ :ಭಾರತದ ರೈತರ ಕಠಿಣ ನಿರ್ಧಾರ, ಪಾಕಿಸ್ತಾನ ಮಾರುಕಟ್ಟೆಯಲ್ಲಿ ತಳಮಳ..!
Image Copyright : google.com