ಲಡಾಖ್ : ಭಾರತ ಮತ್ತು ಚೀನಾ ಗಡಿಯಲ್ಲಿನ ಬಿಕ್ಕಟ್ಟು ಒಮ್ಮೆಲೆ ತಾರಕಕ್ಕೇರಿದೆ. ಪೂರ್ವ ಲಡಾಖ್ ಗಡಿಯ ಗಲ್ವಾನ್ ಕಣಿವೆಯಲ್ಲಿ ಚೀನಾ ಮತ್ತು ಭಾರತೀಯ ಯೋಧರ ನಡುವೆ ಗಡಿ ಪ್ರದೇಶಕ್ಕೆ ಸಂಬಂಧಿಸಿದಂತೆ ಸಂಘರ್ಷ ಮಿತಿ ಮೀರಿದೆ. ಈ ಸಮಯದಲ್ಲಿ ನಡೆದ ಕದನದಲ್ಲಿ ಕನಿಷ್ಠ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸೋಮವಾರ ರಾತ್ರಿ ಈ ಪ್ರದೇಶದಲ್ಲಿ ನಡೆದ ಸಣ್ಣ ಘರ್ಷಣೆಯಲ್ಲಿ ಓರ್ವ ಸೇನಾ ಅಧಿಕಾರಿ ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇಂದು ಸುಮಾರು 20 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಯಾವುದೇ ಅಧಿಕ್ರತ ಮಾಹಿತಿಗಳು ಬಂದಿಲ್ಲವಾದರೂ, ನಿನ್ನೆ ನಡೆದ ಕಾಳಗದಲ್ಲಿ 17 ಸೈನಿಕರು ಗಾಯಗೊಂಡಿದ್ದರು ಎಂದು ತಿಳಿದುಬಂದಿದೆ. ಲಡಾಖ್ ಪ್ರಾಂತ್ಯದಲ್ಲಿ ಈಗ ಅತೀ ಚಳಿಯ ವಾತಾವರಣ ಇದ್ದು, ಆ ಕಾರಣಗಳಿಂದಾಗಿಯೇ ಉಷ್ಣಾಂಶದ ಇಳಿಕೆಯಿಂದಾಗಿ ಹುತಾತ್ಮರಾಗಿದ್ದಾರೆ ಎಂದು ಹೇಳಲಾಗುತ್ತಿದೆ. .
ಭಾರತೀಯ ಸೇನೆಯು ಈ ಸಮಯದಲ್ಲಿ ತನ್ನ ಮೇಲೆ ದಾಳಿ ನಡೆದ ತಕ್ಷಣ ಪ್ರತಿದಾಳಿಗೆ ಮುಂದಾಗಿದ್ದು, ಚೀನಾ ಸೇನೆಯ 43 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಇನ್ನೂ ಹಲವರು ತೀವ್ರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಈ ಮೂಲಕ ಭಾರತೀಯ ಸೈನಿಕರು 1962 ಭಾರತ ತಾನಲ್ಲ ಎನ್ನುವುದನ್ನು ಸಾರಿ ಹೇಳಿವೆ. ಇದು ಚೀನಾ ಸೇನೆಗೆ ನೀಡಿರುವ ಖಡಕ್ ಉತ್ತರವಾಗಿದ್ದು, ನಮ್ಮ ಮೇಲೆ ದಾಳಿ ಮಾಡಿದರೆ ನಾವು ಸುಮ್ಮನೆ ಕೂರುವುದಿಲ್ಲಾ, ನಮ್ಮ ಗಡಿ ಪ್ರದೇಶದ ಭದ್ರತೆಗೆ ನಾವು ಸದಾ ಸಿದ್ದ ಎನ್ನುವುದನ್ನು ಸಾರಿ ಹೇಳಿವೆ. ಅಲ್ಲದೆ ಈ ಸಮಯದಲ್ಲಿ ಗಾಯಗೊಂಡ ಭಾರತೀಯ ಸೈನಿಕರು ಬಹುಬೇಗ ಚೇತರಿಸಿಕೊಳ್ಳಲಿ ಮತ್ತು ಈ ಸಂಘರ್ಷದಲ್ಲಿ ಹುತಾತ್ಮರಾದ ಪ್ರತಿಯೊಬ್ಬ ವೀರ ಯೋಧನಿಗೆ ದೇವರು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.