ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ: ಕನ್ನಡದಲ್ಲಿ ಕೇಜ್ರಿವಾಲ್‌ ಟ್ವೀಟ್‌

arvind-kejriwal-profoundly-remember-dr-puneeth-rajkumar-death-anniversary

ಪುನೀತ್ ಅಗಲಿ ಒಂದು ವರ್ಷಗಳು ಕಳೆದು ಹೋಗಿದ್ದು, ಪುಣ್ಯ ತಿಥಿಯ ಸಮಯದಲ್ಲಿ ಸಿನಿಮಾ ಗಣ್ಯರು, ರಾಜಕೀಯ ನಾಯಕರು ಸೇರಿದಂತೆ ಹಲವಾರು ಅವರ ಸ್ಮರಣೆಯನ್ನು ಮಾಡುತ್ತಿದ್ದಾರೆ. ಈ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ‘ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನಗಳು’ ಎಂದು ಟ್ವಿಟ್ ಮಾಡಿ ಗಮನ ಸೆಳೆದಿದ್ದಾರೆ.

ಇಂದು ಪುನೀತ್ ರಾಜಕುಮಾರ್ ಅವರಿಗೆ ನಮನ ಸಲ್ಲಿಸಿ ಕೇಜ್ರಿವಾಲ್ ಟ್ವಿಟ್ ಮಾಡಿದ್ದು, ಕನ್ನಡದಲ್ಲಿ ‘ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನಗಳು’ ಎಂದು ಬರೆದಿರುವ ಅವರು ಅವರ ನಟನೆಯ ಚಿತ್ರಗಳು, ನೈಜ ಜೀವನದಲ್ಲಿ ನಡೆದುಕೊಂಡ ಅವರ ನಡತೆಗಳು ಜನರಲ್ಲಿ ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here