‘ಬಿಗ್ ಬಾಸ್(BIGG BOSS)ಕನ್ನಡ ಸೀಸನ್ 9’ ಶೋನ 13 ನೇ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಅರುಣ್ ಸಾಗರ್ (Arun Sagar) ಅವರು ಔಟ್ ಆಗಿದ್ದಾರೆ. ಮುಂದಿನ ವಾರವೇ ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಆದರೆ ಫಿನಾಲೆ ವಾರಕ್ಕೆ ಕಾಲಿಡುವಲ್ಲಿ ಅರುಣ್ ಸಾಗರ್ ಮುಗ್ಗರಿಸಿದ್ದಾರೆ.
ಬಿಗ್ ಬಾಸ್ ಕನ್ನಡ ಆವೃತ್ತಿಯ ಮೊದಲ ಸೀಸನ್ ನಲ್ಲಿ ಭಾಗಿಯಾಗಿದ್ದ ಅರುಣ್ ಸಾಗರ್ ಅವರಿಗೆ ಈ ಬಾರಿ ಎರಡನೆಯ ಅವಕಾಶ ದೊರೆತಿತ್ತು. ಆದರೆ ಫೈನಲ್ ವಾರಕ್ಕೆ ಕಾಲಿಡುವ ಮುನ್ನವೇ ಮನೆಯಿಂದ ಔಟ್ ಆಗಿದ್ದು, ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.
ಬಿಗ್ ಬಾಸ್ ಮನೆಯಲ್ಲಿ ಅರುಣ್ ಸಾಗರ್ ವಿಶೇಷವಾಗಿ ಮನರಂಜನೆ ನೀಡಲು ಪ್ರಯತ್ನಿಸಿದ್ದರು. 93ನೇ ದಿನದವರೆಗೂ ಅವರು ವೀಕ್ಷಕರಿಂದ ಹೆಚ್ಚಿನ ವೋಟ್ ಪಡೆದು ಸೇಫ್ ಆಗಿದ್ದರು. ಆದರೆ ಈ ನಡುವೆ ಅವರಿಗೆ ಕೆಲವೊಂದು ಅಡೆತಡೆ ಉಂಟಾಗಿತ್ತು. ಅವರ ಕೈಗೆ ಪೆಟ್ಟಾಗಿತ್ತು. ಅವರ ಮಗಳು ಅದಿತಿ ಸಾಗರ್ಗೆ ಪೆಟ್ಟಾಗಿದ್ದರಿಂದ ಅವರು ಮಾನಸಿಕವಾಗಿ ಕೊಂಚ ಕುಗ್ಗಿದರು. ಈ ಎಲ್ಲ ಕಾರಣದಿಂದ ಅರುಣ್ ಸಾಗರ್ ಎಲಿಮಿನೇಟ್ ಆಗಬೇಕಾಯಿತು.
ಇದನ್ನೂ ಓದಿರಿ: ಅಮೂಲ್ಯ ಅವಳಿ ಮಕ್ಕಳ ಹಾರೈಸಿದ ವೃಕ್ಷಮಾತೆ ತಿಮ್ಮಕ್ಕ