ದೆಹಲಿ: ಮಾಜಿ ಹಣಕಾಸು ಸಚಿವ ಅರುಣ ಜೇಟ್ಲಿ ಅವರ ಪಾರ್ಥೀವ ಶರೀರವನ್ನು ಸಕಲ ಸರಕಾರಿ ಗೌರವಗಳೊಂದಿಗೆ ಭಾನುವಾರ ದೆಹಲಿಯ ನಿಗಮ್ ಬೋಧ ಘಾಟ್ ನಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಅವರ ಅಂತ್ಯಕ್ರಿಯೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಅವರ ನೂರಾರು ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು. ಅವರ ಚಿತೆಗೆ ಮಗ ರೋಷನ್ ಜೇಟ್ಲಿ ಬೆಂಕಿಯಿಡುವ ಮೂಲಕ ಪಂಚಭೂತಗಳಲ್ಲಿ ಲೀನರಾದರು.

ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಉಸಿರಾಟ ಸಂಬಂಧಿಸಿದ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ ಜೇಟ್ಲಿ(66) ಅವರು ಚಿಕಿತ್ಸೆ ಫಲಕಾರಿಯಾಗದೆ  ಶನಿವಾರ ಕೊನೆಯುಸಿರೆಳೆದರು. ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಅಗಸ್ಟ್ 9 ರಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ (ಏಮ್ಸ್) ಸಂಸ್ಥೆಗೆ ಸೇರಿಸಲಾಗಿತ್ತು.

ಇಂದು ನಡೆದ ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿಗಳಾದ ಮಹಾರಾಷ್ಟ್ರದ ದೇವೇಂದ್ರ ಪಡ್ನವಿಸ್, ಗುಜರಾತನ ವಿಜಯ ರೂಪಾನಿ, ಕರ್ನಾಟಕದ ಬಿ.ಎಸ್. ಯಡಿಯೂರಪ್ಪ,ಬಿಹಾರದ ನಿತೀಶ್ ಕುಮಾರ ಮತ್ತು ಉತ್ತರಾಖಂಡನ ತ್ರಿವೇಂದ್ರ ಸಿಂಗ್ ರಾವತ್ ಪಾಲ್ಗೊಂಡಿದ್ದರು.


ಹಿರಿಯ ಮುಖಂಡರಾದ ಎಲ್.ಕೆ. ಅಡ್ವಾಣಿ, ಗೃಹ ಸಚಿವ ಅಮಿತ್ ಷಾ, ಉಪಾಧ್ಯಕ್ಷ ವೆಂಕಯ್ಯ ನಾಯ್ಡು, ರಕ್ಷಣಾ ಸಚಿವ ರಾಜನಾತ್ ಸಿಂಗ್, ಪಕ್ಷದ ಕಾರ್ಯಕಾರಿ ಅಧ್ಯಕ್ಷ ಜೆ.ಪಿ. ನಡ್ದಾ, ಕೇಂದ್ರ ಸಚಿವರುಗಳಾದ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಅನುರಾಗ್ ಠಾಕೂರ್, ಬಿಜೆಪಿ ಸಂಸದ ವಿಜಯ್ ಗೋಯಲ್ ಮತ್ತು ವಿನಯ್, ಕಾಂಗ್ರೆಸ್ ಮುಖಂಡರಾದ ಜ್ಯೋತಿರಾದಿತ್ಯ ಸಿಂದಿಯಾ ಮತ್ತು  ಕಪಿಲ್ ಸಿಬಲ್ ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಬಿಜೆಪಿಯ ಕೇಂದ್ರ ಕಚೇರಿಯಿಂದ ಹೂವುಗಳಿಂದ ಅಲಂಕರಿಸಿದ್ದ ಗಾಡಿಯಲ್ಲಿ ಬೋಧ ಘಾಟ್ ಗೆ ತರಲಾಯಿತು. ಈ ಸಂಧರ್ಭದಲ್ಲಿ ಜೇಟ್ಲಿಯವರಿಗೆ ಅಂತಿಮ ನಮನ ಸಲ್ಲಿಸಲು ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಬೆಳಿಗ್ಗೆಯಿಂದಲೇ ಕೇಂದ್ರ ಕಚೇರಿಯ ಹೊರಗೆ ಸಾಲುಗಟ್ಟಿ ನಿಂತಿದ್ದರು. ಅಲ್ಲದೇ ನಿಘಮ್ ಘಾಟ್ ಗೆ ಹೋಗುವ ದಾರಿಯುದ್ಧಕ್ಕೂ ಜೇಟ್ಲಿಯವರನ್ನು ಸ್ಮರಿಸುವ ಪೋಸ್ಟರ್ ಗಳಿಂದ ತುಂಬಿ ಹೋಗಿತ್ತು.

ಇದನ್ನೂ ಓದಿರಿ: ಪಾತಾಳಕ್ಕೆ ಕುಸಿದ ಪಾಕ್..!  ದಿವಾಳಿಯತ್ತ ಪಾಕ್ ನ ಆರ್ಥಿಕ ಸ್ಥಿತಿ..!
SPONSORED CONTENT

LEAVE A REPLY

Please enter your comment!
Please enter your name here