ಅರುಣಾಚಲ ಪ್ರದೇಶ: ಶುಕ್ರವಾರ, ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಬಳಿ ಸೇನೆಯ ಸುಧಾರಿತ ಲಘು ಹೆಲಿಕಾಪ್ಟರ್ (ALH) ಪತನಗೊಂಡಿತು. ಅಪ್ಪರ್ ಸಿಯಾಂಗ್ ಜಿಲ್ಲೆಯ ಟ್ಯೂಟಿಂಗ್ ಪ್ರಧಾನ ಕಛೇರಿಯಿಂದ 25 ಕಿಮೀ ದೂರದಲ್ಲಿ ಅಪಘಾತ ಸಂಭವಿಸಿದೆ.
ವರದಿಗಳ ಪ್ರಕಾರ, ಅಪಘಾತದ ಸ್ಥಳಕ್ಕೆ ರಸ್ತೆ ಸಂಪರ್ಕವಿಲ್ಲ ಮತ್ತು ರಕ್ಷಣಾ ತಂಡವನ್ನು ಕಳುಹಿಸಲಾಗಿದೆ. ಬೆಳಗ್ಗೆ 10.43ಕ್ಕೆ ಈ ಘಟನೆ ನಡೆದಿದೆ. ಶೋಧ ಕಾರ್ಯಗಳು ನಡೆಯುತ್ತಿವೆ. ಇನ್ನೇನ್ನು ಹೆಚ್ಚಿನ ಮಾಹಿತಿಗಳು ಬರಬೇಕಿದೆ.
ಹೆಲಿಕಾಪ್ಟರ್‌ನಲ್ಲಿ ಎಷ್ಟು ಮಂದಿ ಇದ್ದರು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಕಾಪ್ಟರ್ ಪತನವಾದ ವಿಡಿಯೋವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ವೈರಲ್ ಆಗುತ್ತಿದೆ. ಕಾಪ್ಟರ್ ಪತನವಾಗುತ್ತಿದ್ದಂತೆಯೇ ಪರ್ವತದಿಂದ ಬೆಂಕಿ ಮಿಶ್ರಿತ ದಟ್ಟ ಹೊಗೆ ಏರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಅಪಘಾತ ಸ್ಥಳದಿಂದ ಕೇಂದ್ರ ಸಚಿವ ಕಿರಣ್ ರಿಜಿಜು ವಿಡಿಯೋ ಪೋಸ್ಟ್ ಮಾಡಿದ್ದಾರೆ. “ಅರುಣಾಚಲ ಪ್ರದೇಶದ ಮೇಲಿನ ಸಿಯಾಂಗ್ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಸುಧಾರಿತ ಲಘು ಹೆಲಿಕಾಪ್ಟರ್ ಅಪಘಾತದ ಬಗ್ಗೆ ಬಹಳ ಗೊಂದಲದ ಸುದ್ದಿಯನ್ನು ಸ್ವೀಕರಿಸಲಾಗಿದೆ. ನನ್ನ ಆಳವಾದ ಪ್ರಾರ್ಥನೆಗಳು” ಎಂದು ಅವರು ಬರೆದಿದ್ದಾರೆ.
Received very disturbing news about Indian Army’s Advanced Light Helicopter crash in Upper Siang District in Arunachal Pradesh. My deepest prayers 🙏 pic.twitter.com/MNdxtI7ZRq
— Kiren Rijiju (@KirenRijiju) October 21, 2022