ನವದೆಹಲಿ: ಅಯೋಧ್ಯೆಯ ರಾಮಮಂದಿರ ಮತ್ತು ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಹಲವು ದಿನಗಳಿಂದ ಸುಪ್ರೀಂಕೋರ್ಟ್ ಸುದೀರ್ಘ ವಿಚಾರಣೆ ನಡೆಸಿ ರಂಜನ್ ಗೊಗೋಯ್ ನೇತ್ರತ್ವದ ಐವರ ಸಾವಿಧಾನಿಕ ಪೀಠ ತೀರ್ಪನ್ನು ಕಾಯ್ದಿರಿಸಿದೆ.
ರಂಜನ್ ಗೊಗೋಯ್ ನೇತ್ರತ್ವದ ಐವರ ಸಾವಿಧಾನಿಕ ಪೀಠ ಅಗಸ್ಟ್ 6 ರಿಂದ ಪ್ರತಿದಿನ ಅಂದರೆ ಸುಧೀರ್ಘ 40 ದಿನಗಳ ಕಾಲ ವಿಚಾರಣೆ ನಡೆಸಿ ಇಂದು ತೀರ್ಪನ್ನು ಕಾಯ್ದಿರಿಸಿದೆ. ಈ ಐವರ ಸಾವಿಧಾನಿಕ ಪೀಠದಲ್ಲಿ ನ್ಯಾಯಮೂರ್ತಿಗಳಾದ ಶರದ್ ಅರವಿಂದ, ಅಶೋಕ ಭೂಷಣ, ಡಿ. ವೈ. ಚಂದ್ರಚೂಡ, ಎಸ್. ಅಬ್ದುಲ್ ನಸೀರ್ ಮತ್ತು ರಂಜನ್ ಗೊಗೋಯ್ ಇದ್ದಾರೆ.
ಇಂದು ನಡೆದ ವಿಚಾರಣೆಯ ವೇಳೆಯಲ್ಲಿ ಒಂದು ಹೈಡ್ರಾಮಾ ನಡೆದು ಹೋಗಿದೆ. 1986 ರಲ್ಲಿ ರಚಿತವಾಗಿರುವ ‘ಅಯೋಧ್ಯಾ ರಿವಿಸಿಟೆಡ’ ಎಂಬ ಪುಸ್ತಕವನ್ನು ಹಿಂದೂ ಮಹಾಸಭಾ ವಕೀಲರು ನ್ಯಾಯಾಲಯದ ಮುಂದೆ ಇರುಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸುನ್ನಿ ವಕ್ ಬೋರ್ಡ್ ಪರ ವಕೀಲ ರಾಜೀವ್ ಧವನ್ ಪುಸ್ತಕ ಮತ್ತು ನಕ್ಷೆಯನ್ನು ನ್ಯಾಯಾಧೀಶರ ಎದುರಲ್ಲೇ ಹರಿದು ಎಸೆದರು. ಇದಕ್ಕೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ತೀವ್ರ ಅಸಮಧಾನ ವ್ಯಕ್ತಪಡಿಸಿದರು. ಅಲ್ಲದೇ ಇದೆ ರೀತಿ ಮುಂದುವರೆದರೆ ಪೀಠದಿಂದ ಎದ್ದು ತಾವೇ ಹೊರನಡೆಯುವುದಾಗಿ ಎಚ್ಚರಿಕೆ ನೀಡಿದರು.
ಸದ್ಯ ನ್ಯಾಯಾಲಯ ನವೆಂಬರ್ 17 ರ ಒಳಗೆ ತೀರ್ಪು ನೀಡುತ್ತೇವೆ ಎಂದು ಈ ಹಿಂದೆ ಹೇಳಿದಂತೆ ನಡೆದುಕೊಂಡಿದ್ದು, ಕೋರ್ಟ್ ನೀಡುವ ತೀರ್ಪಿನ ಮೇಲೆ ಕುತೂಹಲ ಕೆರಳುವಂತೆ ಮಾಡಿದೆ.
ಇದನ್ನೂ ಓದಿರಿ: ಬೆಳ್ಳಂ ಬೆಳಗ್ಗೆ ಮಹಾಬಲಿಪುರಂ ಬೀಚ್‌ನಲ್ಲಿ ಪ್ರಧಾನಿ ಮೋದಿಯಿಂದ ಸ್ವಚ್ಛತೆ