ನವದೆಹಲಿ: ಇಡೀ ಜಗತ್ತನ್ನು ಆವರಿಸಿರುವ ಕರೋನ ವೈರಸ್ನಿಂದಾಗಿ ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ತಮ್ಮ ಮನೆಗಳಲ್ಲಿ ಬಂಧಿತರಾಗಿದ್ದಾರೆ. ಭಾರತದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 14 ರವರೆಗೆ ಲಾಕ್ ಡೌನ್ ವಿಧಿಸಿದ್ದಾರೆ. ಆದರೆ ಆಟಗಾರರಿಗೆ ಮನೆಯಲ್ಲಿಯೇ ಉಳಿಯುವುದು ಎಂದರೆ ತುಂಬಾ ಕಷ್ಟಕರವಾದ ವಿಷಯವಾಗಿದೆ. ಏಕೆಂದರೆ ಅವರಿಗೆ ಪ್ರತಿದಿನವೂ ತಮ್ಮ ಕ್ರೀಡೆಯ ಕುರಿತಾದ ಅಭ್ಯಾಸದಲ್ಲಿ ತೊಡಗುವುದು ಮತ್ತು ತರಬೇತಿ ಪಡೆಯುವುದು ಅವಶ್ಯವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕ್ರೀಡಾ ದೈತ್ಯರು ಮನೆಯೂ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಅವರು ತಮ್ಮ ಈ ಸಮಯದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಜೊತೆಗೆ ಕರೋನಾ ವಿರುದ್ಧ ಹೋರಾಡಲು ಅವರ ಅಭಿಮಾನಿಗಳಿಗೆ ಸಂದೇಶವನ್ನು ನೀಡುತ್ತಿದ್ದಾರೆ. ಒಲಿಂಪಿಯನ್ ಬಿಲ್ಲುಗಾರರಾದ (ಆರ್ಚರ್) ದೀಪಿಕಾ ಕುಮಾರಿ ಮತ್ತು ಅತನು ದಾಸ್ ಅವರು ಅಭ್ಯಾಸದಲ್ಲಿ ತೊಡಗಿರುವ ಕೆಲವು ಚಿತ್ರಗಳು ಮತ್ತು ವೀಡಿಯೊಗಳು ಬಹಿರಂಗವಾಗಿದೆ.
ಲಾಕ್ ಡೌನ್ ಮಾಡುವ ಕೆಲವೇ ಗಂಟೆಗಳ ಮೊದಲು ಆರ್ಚರ್ ದೀಪಿಕಾ ಮತ್ತು ಅತನು ದಾಸ್ ಪುಣೆಯಿಂದ ಕೋಲ್ಕತ್ತಾಗೆ ಆಗಮಿಸಿದರು. ಅವರು ಹೇಳಿಕೊಂಡಿರುವಂತೆ ತಮ್ಮ ಈ ಲಾಕ್ ಡೌನ್ ಸಮಯದಲ್ಲಿ, ನಾವು ನಮ್ಮ ದಿನಚರಿಯನ್ನು ಮೊದಲಿನಂತೆ ಇಟ್ಟುಕೊಂಡಿದ್ದೇವೆ. ದಿನವು ಧ್ಯಾನ-ಯೋಗದಿಂದ ಪ್ರಾರಂಭವಾಗುತ್ತದೆ. ಮನೆಯಲ್ಲಿ 10 ಮೀಟರ್ ವ್ಯಾಪ್ತಿಯ ಪೋರ್ಟಬಲ್ ಶ್ರೇಣಿಯ ಅಭ್ಯಾಸ ಸ್ಥಳವನ್ನು ನಿರ್ಮಿನಿರ್ಮಿಸಿಕೊಂಡಿದ್ದೇವೆ. ಅಲ್ಲದೇ ಇದರಲ್ಲಿಯೇ ನಾವಿಬ್ಬರು ಅಭ್ಯಾಸ ಮಾಡುತ್ತೇವೆ ಎಂದು ತಮ್ಮ ಅಭ್ಯಾಸದಲ್ಲಿ ತೊಡಗಿರುವ ಪೋಟೋವನ್ನು ಹಂಚಿಕೊಂಡಿದ್ದಾರೆ. ಇವರಿಬ್ಬರೂ 2018 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ದೀಪಿಕಾ-ಅತನು ಟೋಕಿಯೋ ಒಲಿಂಪಿಕ್ಸ್ನಲ್ಲಿ ಮಿಶ್ರ ಡಬಲ್ಸ್ ಪಂದ್ಯಕ್ಕಾಗಿ ಅವಕಾಶ ಪಡೆದಿದ್ದಾರೆ.
We fight corona, stayed at home but active with our passion. Stay fit during the lockdown as well.#worldarchery #indianarcheryteam #stayathome #stayfit #kiranrijiju #JaiHind pic.twitter.com/JrAHr4JrcN
— Atanu Das (@ArcherAtanu) March 26, 2020
ಮನೆಯಲ್ಲೇ ಪ್ರತಿದಿನ ಅಭ್ಯಾಸ:
ಮನೆಯಲ್ಲಿ ಸಣ್ಣ ವ್ಯಾಪ್ತಿಯಲ್ಲಿ ಅಭ್ಯಾಸ ಮಾಡುತ್ತಿದ್ದೇನೆ ಎಂದು ದೀಪಿಕಾ ಹೇಳಿದ್ದಾರೆ. ಒಂದು ದಿನ ಲಾಕ್ಡೌನ್ ನಡೆದಾಗ ನಾವು ಪುಣೆ ಕ್ಯಾಂಪ್ನಲ್ಲಿದ್ದೆವು. ಆದರೆ ಶಿಬಿರವನ್ನು ಮುಚ್ಚಿದ್ದರಿಂದ ಮರುದಿನವೇ ನಾವು ಕೋಲ್ಕತ್ತಾಗೆ ಬಂದೆವು. ನಮ್ಮ ಮನೆಯಲ್ಲಿ ಒಂದು ಸಣ್ಣ ಸ್ಥಳವನ್ನು ಮಾಡಿಕೊಂಡಿದ್ದೇವೆ, ಇದರಲ್ಲಿ ನಾವು ಪ್ರಸ್ತುತ 10 ಮೀಟರ್ ವ್ಯಾಪ್ತಿಯಲ್ಲಿ ಅಭ್ಯಾಸ ಮಾಡುತ್ತಿದ್ದೇವೆ. ನಮ್ಮ ಆಟವು ಸಂಪೂರ್ಣವಾಗಿ ತಾಂತ್ರಿಕವಾಗಿದೆ. ನಾವು ಮೂರು ದಿನಗಳವರೆಗೆ ಅಭ್ಯಾಸವನ್ನು ಬಿಟ್ಟರೆ ತೊಂದರೆಗಳು ಹೆಚ್ಚಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ ನಾವಿಬ್ಬರೂ ಪ್ರತಿದಿನ ಸುಮಾರು 200 ಬಾಣಗಳನ್ನು ಹೊಡೆದು ಅಭ್ಯಾಸದಲ್ಲಿ ತೊಡಗಿದ್ದೇವೆ ಎಂದು ದೀಪಿಕಾ ತಮ್ಮ ಪರಿಸ್ಥಿತಿಯನ್ನು ಅಭಿಮಾನಿಗಳಿಗೆ ಹೇಳಿಕೊಂಡಿದ್ದಾರೆ.
ಫಿಟ್ನೆಸ್ಗಾಗಿ ನಾವು ಮನೆಯಲ್ಲಿ ಯೋಗ ಮತ್ತು ಸಣ್ಣ ಪ್ರಮಾಣದಲ್ಲಿ ವ್ಯಾಯಾಮಗಳನ್ನು ಮಾಡುತ್ತೇವೆ. ಅಭ್ಯಾಸಕ್ಕಿಂತ ನಿರ್ವಹಣೆ ಫಿಟ್ನೆಸ್ ಹೆಚ್ಚು ಮಹತ್ವದ್ದಾಗಿದೆ ಏಕೆಂದರೆ ಮನೆಯ ಆಹಾರವು ಉತ್ತಮ ರುಚಿ ಮತ್ತು ನಾನು ತುಂಬಾ ತಿನ್ನುತ್ತಿದ್ದೇನೆ. ಅಂತಹ ಪರಿಸ್ಥಿತಿಯಲ್ಲಿ, ಫಿಟ್ನೆಸ್ ಹೆಚ್ಚು ಅಗತ್ಯವಾಗಿದೆ ಎಂದು ಹೇಳಿದರು.
ಈ ದಿನಗಳಲ್ಲಿ ಅಭ್ಯಾಸದ ಸಮಯದಲ್ಲಿ ನಾವಿಬ್ಬರೂ ಪರಸ್ಪರ ಮಾರ್ಗದರ್ಶನ ನೀಡಿ ಕೊಳ್ಳುತ್ತೇವೆ ಎಂದು ಅಟನು ಹೇಳಿದ್ದಾರೆ. ಅತನು, ‘ನಾವಿಬ್ಬರೂ ಒಟ್ಟಿಗೆ ಅಭ್ಯಾಸ ಮಾಡಲು ಪ್ರಾರಂಭಿಸಿ ಬಹಳ ಸಮಯವಾಗಿದೆ. ಇದೀಗ, ನಾವು ಮನೆಯಲ್ಲಿ ಅಭ್ಯಾಸ ಮಾಡುವಾಗ ಪರಸ್ಪರ ಸಂಭಾಷಣೆಯನ್ನು ಮಾಡಿಕೊಂಡು ಯಾವ ರೀತಿ ಬದಲಾವಣೆ ಮಾಡಿಕೊಳ್ಳಬೇಕು ಅನ್ನುವುದನ್ನು ಕಾರ್ಯಗತಗೊಳಿಸುತ್ತೇವೆ. ಇಬ್ಬರೂ ಪರಸ್ಪರ ಸಲಹೆಗಳನ್ನು ನೀಡುವ ಮೂಲಕ ಮನೆಯಲ್ಲಿ ಅಭ್ಯಾಸ ಮಾಡಿಕೊಳ್ಳುತ್ತಿದ್ದೇವೆ. ನಾನು 2013 ರಿಂದಲೂ ಯಾವುದೇ ತರಬೇತುದಾರನನ್ನು ಹೊಂದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನನಗೆ ಹೆಚ್ಚಿನ ಯಾವುದೇ ವ್ಯತ್ಯಾಸ ಕಂಡುಬರುತ್ತಿಲ್ಲಾ, ಇನ್ನೂ ಶಿಬಿರದಲ್ಲಿ ಅಭ್ಯಾಸ ಮಾಡುವುದು ಅದೊಂದು ಅನುಭವವೇ ಬೇರೆ ಅದು ಇಲ್ಲಿ ಸಾಧ್ಯವಿಲ್ಲಾ ಎಂದು ಹೇಳಿದರು.