appus-dream-project-gandhada-gudi-trailer-ou

ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಅಪ್ಪು ಡ್ರೀಮ್ ಪ್ರಾಜೆಕ್ಟ್ ‘ಗಂಧದ ಗುಡಿ‘ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಗಂಧದ ಗುಡಿ ಚಿತ್ರದಲ್ಲಿ ಸೆರೆಹಿಡಿಯಲಾದ ಪ್ರಕೃತಿ ಸೌಂದರ್ಯ, ನೆಲ-ಜಲ, ವನ್ಯ ಸಂಪತ್ತು ಹಾಗೂ ಪುನೀತ್ ಅವರ ಎನರ್ಜಿ ನೋಡಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಪಿಆರ್ ಕೆ ಸ್ಟುಡಿಯೋ ಇಂದು ಭಾನುವಾರ ಗಂಧದ ಗುಡಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದು, ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಮೋಘವರ್ಷ ನಿರ್ದೇಶನದ ಈ ಚಿತ್ರವು ರಾಜ್ಯದ ವನ್ಯ-ಜೀವಿ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವನ್ನು ತೆರೆ ಮೇಲೆ ತರಲಿದೆ. ಇದರ ಟೀಸರ್ ದೃಶ್ಯಗಳು, ಬೆಳಕಿನ ಸಂಯೋಜನೆ, ಹಿನ್ನಲೆ ಸಂಗೀತ ಅನನ್ಯವಾಗಿದೆ. ಪುನೀತ್ ತಾವೇ ಡ್ಯೂಪ್ ಇಲ್ಲದೇ ಸಾಹಸ ದೃಶ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮತ್ತೆ ಮತ್ತೆ ವೀಕ್ಷಿಸಬೇಕೆನ್ನಿಸುವ ರೀತಿಯಲ್ಲಿ ಟೀಸರ್ ಮೂಡಿಬಂದಿದೆ.

ಇದನ್ನೂ ಓದಿರಿ: “ನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿ” ಪುನೀತ್ ರಾಜಕುಮಾರ್ ಟ್ವಿಟ್ಟರ್ ಖಾತೆಯಿಂದ ಹೊಸ ಪೋಸ್ಟ್ !

ಗಂಧದ ಗುಡಿ ಟೀಸರ್ ವೀಕ್ಷಿಸಿದ ನರೇಂದ್ರ ಮೋದಿಯವರು ಪ್ರಶಂಸೆ ವ್ಯಕ್ತಪಡಿಸಿದ್ದು, “ಅಪ್ಪು ಜಗತ್ತಿನಾದ್ಯಂತ ಲಕ್ಷಾಂತರ ಹೃದಯಗಳಲ್ಲಿ ನೆಲೆಸಿದ್ದಾರೆ. ಅವರು ತೇಜಸ್ಸಿನ ಪ್ರತೀಕ, ಚೈತನ್ಯದ ಚಿಲುಮೆ ಮತ್ತು ಸರಿಸಾಟಿಯಿಲ್ಲದ ಪ್ರತಿಭಾವಂತರಾಗಿದ್ದರು. ಗಂಧದ ಗುಡಿ ಪ್ರಕೃತಿ ಮಾತೆಗೆ, ಕರ್ನಾಟಕದ ನೈಸರ್ಗಿಕ ಸೌಂದರ್ಯ ಹಾಗು ಪರಿಸರ ಸಂರಕ್ಷಣೆಗೆ ಸಲ್ಲಿಸಲಾದ ಗೌರವ. ಈ ಪ್ರಯತ್ನಕ್ಕೆ ನನ್ನ ಶುಭ ಹಾರೈಕೆಗಳು” ಎಂದು ಟ್ವೀಟ್ ಮಾಡಿದ್ದಾರೆ.

2 ನಿಮಿಷ 39 ಸೆಕೆಂಡ್ ಗಳ ಟ್ರೈಲರ್ ನಲ್ಲಿ ನಾಡಿನ ಅರಣ್ಯ, ಜಲ ಹಾಗೂ ವನ್ಯ ಸಂಪತ್ತನ್ನು ತೋರಿಸಲಾಗಿದೆ. ಟ್ರೈಲರ್ ನಲ್ಲಿ ತಮ್ಮ ನೆಚ್ಚಿನ ನಟನನ್ನು ಅಪ್ಪು ಅಭಿಮಾನಿಗಳು ಕಣ್ತುಂಬಿಕೊಂಡು, ಸಂತೋಷ ಪಡುತ್ತಿದ್ದಾರೆ. ಚಿತ್ರದಲ್ಲಿ ನಿರ್ದೇಶಕ ಅಮೋಘವರ್ಷ ಅವರ ಜೊತೆಯಲ್ಲಿನ ಪುನೀತ್ ಅವರ ಜರ್ನಿಯನ್ನು ನೋಡಬಹುದಾಗಿದೆ. ಗಂಧದ ಗುಡಿ ನಮ್ಮನ್ನೆಲ್ಲ ಹೊಸತೊಂದು ಲೋಕಕ್ಕೆ ಕರೆದೊಯ್ಯಲಿದೆ ಎಂಬ ಭರವಸೆ ಟ್ರೇಲರ್‌ನಲ್ಲಿ ಕಾಣುತ್ತದೆ.

ಇಂದು (ಅಕ್ಟೋಬರ್ 9) ಪಿಆರ್ ಕೆ ಸ್ಟುಡಿಯೋ ನಿರ್ಮಾಣದ ಗಂಧದ ಗುಡಿ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ನರ್ತಕಿ ಚಿತ್ರಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದಲ್ಲದೇ ಪಿಆರ್ ಕೆ ಅಧಿಕೃತ ಯೂಟ್ಯೂಬ್ ಚಾನಲ್ ನಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಟೀಸರ್ ಬಿಡುಗಡೆಯಾದ ಕೆಲ ಸಮಯದಲ್ಲಿಯೇ 4 ಲಕ್ಷ 36 ಸಾವಿರ ಜನ ವೀಕ್ಷಣೆ ಮಾಡಿದ್ದಾರೆ. 6 ಸಾವಿರದ 365 ಕಾಮೆಂಟ್ ಗಳು ಬಂದಿವೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಂಸದ ಶಿವಮೊಗ್ಗ ಬಿ. ವೈ. ರಾಘವೇಂದ್ರ, ನಟ ಯಶ್, ಧನಂಜಯ, ಅನುಪ್ ಬಂಢಾರಿ, ಸಂಯುಕ್ತ ಹೊರನಾಡು, ಸಂತೋಷ್ ಆನಂದ್ ರಾಮ್ ಸೇರಿದಂತೆ ಕಲಾವಿದರು ಗಣ್ಯರು ಶುಭಾಶಯ ಕೋರಿದ್ದಾರೆ. ಪುನೀತ್ ಅಭಿನಯದ ಗಂಧದ ಗುಡಿ ಸಾಕ್ಷ್ಯಚಿತ್ರ ಇದೇ ತಿಂಗಳು 28 ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here