ಹಲವು ದಿನಗಳ ಕಾಯುವಿಕೆಯ ನಂತರ, ಭಾರತೀಯ ವಾಯುಪಡೆಗೆ ಅಮೆರಿಕಾದಲ್ಲಿ ತಯಾರಾದ ಅಪಾಚೆ ಹೆಲಿಕಾಪ್ಟರ್ ವಿಮಾನವನ್ನು ಸೇರ್ಪಡೆಗೊಂಡಿದೆ. ಮಂಗಳವಾರ, 8 ಅಪಾಚೆ ಹೆಲಿಕಾಪ್ಟರ್ಗಳು ವಾಯುಪಡೆಗೆ ಸೇರ್ಪಡೆಗೊಂಡಿದ್ದು, ಒಪ್ಪಂದದ ಪ್ರಕಾರ, ಒಟ್ಟು 22 ಹೆಲಿಕಾಪ್ಟರ್ ಗಳು 2020 ರ ವೇಳೆಗೆ ವಾಯುಪಡೆಗೆ ಸೇರಬೀಕಾಗಿದೆ.
ಸೆಪ್ಟೆಂಬರ್ 2015 ರಲ್ಲಿ, 22 ಅಪಾಚೆ ಯುದ್ಧ ವಿಮಾನಗಳು ಮತ್ತು 15 ಚಿನೂಕ್ ಹೆಲಿಕಾಪ್ಟರ್ಗಳನ್ನು ಕರೀದಿಸಲು ಭಾರತೀಯ ವಾಯುಪಡೆಯು ಬೋಯಿಂಗ್ ಮತ್ತು ಯುಎಸ್ ಸರ್ಕಾರದೊಂದಿಗೆ 3 ಬಿಲಿಯನ್ ಒಪ್ಪಂದಕ್ಕೆ ಸಹಿ ಹಾಕಿತ್ತು. ಚಿನೂಕ್ ಚಾಪರ್ನ ಮೊದಲ ಬ್ಯಾಚ್ ಕೂಡ ಈ ವರ್ಷ ಭಾರತೀಯ ವಾಯುಪಡೆಗೆ ಸೇರಿಕೊಂಡಿತ್ತು ಅಲ್ಲದೇ ಈಗ ಈ 8 ಅಪಾಚೆ ಹೆಲಿಕಾಪ್ಟರ್ (Boeing AH-64 Apache) ಸೇರಿಕೊಂಡಿವೆ.

ಈ ಹೆಲಿಕಾಪ್ಟರ್ ನಿರಂತರವಾಗಿ ನಾಲ್ಕರಿಂದ ಐದು ಗಂಟೆಗಳ ಕಾಲ ಕಾರ್ಯಾಚರಣೆಯಲ್ಲಿ ತೊಡಗಬಹುದು. ಅಪಾಚೆ ಹೆಲಿಕಾಪ್ಟರ್ ಅಪಾರ ಸಾಮರ್ತ್ಯ ಹೊಂದಿದ್ದು, ಸುಮಾರು 14 ಕ್ಷಿಪಣಿಗಳನ್ನು ಏಕಕಾಲದಲ್ಲಿ ಹಾರಿಸಬಹುದು.
ಹೆಲಿಕಾಪ್ಟರ್ ನ ವಿಶೇಷತೆಗಳೇನು ?
ಈ ಅಪಾಚೆ ಹೆಲಿಕಾಪ್ಟರ್ ಗಳು ಅಮೇರಿಕಾ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಲಿಕಾಪ್ಟರ್ಗಳಷ್ಟೆ ಸಾಮರ್ತ್ಯವನ್ನು ಹೊಂದಿವೆ. ಇವುಗಳು ಪರ್ವತ, ಗುಡ್ಡಗಾಡು ಹಾಗೂ ಬೆಟ್ಟಗಳಲ್ಲಿ ಮಳೆ, ಗಾಳಿ ಯಾವುದೇ ಹವಾಮಾನ ವೈಪರಿತ್ಯಗಳ ನಡುವೆ ಕೆಲಸ ಮಾಡುವ ಸಾಮರ್ತ್ಯ ಹೊಂದಿದೆ. ಈ ಹೆಲಿಕಾಪ್ಟರ್ ಗಳನ್ನು ಭಾರತೀಯ ವಾಯುಪಡೆಗೆ ಸಹಾಯವಾಗುವಂತೆ ರಚಿಸಲಾಗಿದ್ದು, ರಾಕೆಟ್ ಮತ್ತು ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ತ್ಯ ಹೊಂದಿದೆ.
ಹವಾಮಾನ ವೈಪರಿತ್ಯದಂತಹ ಸಂದರ್ಭದಲ್ಲಿಯೂ ಸೇನೆಗೆ ನೆರವಾಗಲು, ಬೆಟ್ಟ ಹಾಗೂ ಕಡಿದಾದ ಪ್ರದೇಶಗಳಲ್ಲಿ ಸಂಚರಿಸಿ ತನ್ನ ಕಾರ್ಯ ನಿರ್ವಹಿಸುವ ಅಪರಿಮಿತವಾದ ಶಕ್ತಿಯನ್ನು ಇದು ಹೊಂದಿದೆ. ಯುದ್ಧದ ಸಮಯದಲ್ಲಿ ಭೂಸೇನೆಗೆ ನೆರವಾಗಲು ಮತ್ತು ಪೂರಕವಾಗಿ ಕೆಲಸ ನಿರ್ವಹಿಸಲು ಸಹಾಯಕವಾಗಲಿವೆ.
ಇದನ್ನೂ ಓದಿರಿ: ಮತ್ತೆ ಮಿಗ್-21 ಏರಿದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್

ಈ ಒಪ್ಪಂದದ ಕುರಿತು ಕೆಲವು ವಿಷಯಗಳು:
- ತರಬೇತಿ, ಉತ್ಪಾದನೆ ಮತ್ತು ಬೆಂಬಲಕ್ಕಾಗಿ ಭಾರತ ಮತ್ತು ಬೋಯಿಂಗ್ ನಡುವೆ 2015 ರ ಸೆಪ್ಟೆಂಬರ್ 29 ರಂದು ರಂದು ಒಪ್ಪಂದ ನಡೆಯಿತು.
- ಇದಲ್ಲದೆ, 2017 ರಲ್ಲಿ, 6 ಅಪಾಚೆ ಹೆಲಿಕಾಪ್ಟರ್ಗಳನ್ನು ಶಸ್ತ್ರಾಸ್ತ್ರಗಳೊಂದಿಗೆ ವಿತರಿಸಲಾಯಿತು ಎಂದು ರಕ್ಷಣಾ ಸಚಿವಾಲಯ ಹೇಳಿದೆ.
- 2018 ರಲ್ಲಿಯೇ, ಭಾರತೀಯ ವಾಯುಪಡೆಯ ಕೆಲವು ಸೈನಿಕರು ಬೋಯಿಂಗ್ ಮತ್ತು ಯುಎಸ್ ವಾಯುಪಡೆಯೊಂದಿಗೆ ಯು ಎಸ್ ನಲ್ಲಿ ತರಬೇತಿ ನೀಡಲಾಯಿತು.
- ಇಲ್ಲಿಯವರೆಗೆ, ಒಟ್ಟು 2200 ಅಪಾಚೆ ಹೆಲಿಕಾಪ್ಟರ್ಗಳನ್ನು ಬೋಯಿಂಗ್ ವಿಶ್ವಾದ್ಯಂತ ತಲುಪಿಸಿದೆ.
- ಈ ಆಧುನಿಕ ಯುದ್ಧ ಶಸ್ತ್ರಾಸ್ತ್ರವನ್ನು ಪಡೆದ ವಿಶ್ವದ 14 ನೇ ದೇಶ ಭಾರತವಾಗಲಿದೆ.
- ಗಮನಾರ್ಹವಾಗಿ, ಭಾರತವು ಚಿನೂಕ್ ಅನ್ನು ಅಮೆರಿಕದಿಂದ ಪಡೆದುಕೊಂಡಿದೆ, ಅಪಾಚೆ ಈಗ ಬಂದಿದೆ. ಶೀಘ್ರದಲ್ಲೇ ರಫೇಲ್ ವಿಮಾನವನ್ನು ಫ್ರಾನ್ಸ್ನಿಂದ ಭಾರತಕ್ಕೆ ತಲುಪಲಿವೆ.
ಇದನ್ನೂ ಓದಿರಿ: ಚಂದ್ರಯಾನ್ -2: ಆರ್ಬಿಟರ್ನಿಂದ ಯಶಸ್ವಿಯಾಗಿ ಬೇರ್ಪಟ್ಟ ಲ್ಯಾಂಡರ್ ವಿಕ್ರಮ್