ನವದೆಹಲಿ: ಜವಾಹರ್ ಲಾಲ್ ನೆಹರು (JNU) ವಿಶ್ವವಿದ್ಯಾಲಯದ ಗೋಡೆಗಳ ಮೇಲೆ ‘ಬ್ರಾಹ್ಮಣರು, ಬನಿಯಾಗಳು ಕ್ಯಾಂಪಸ್ ತೊರೆಯಿರಿ’ ಎಂಬ ಹೇಳಿಕೆಗಳನ್ನು ಬರೆಯಲಾಗಿದ್ದು, ಮತ್ತೊಮ್ಮೆ ವಿವಾದ ಭುಗಿಲೆದ್ದಿದೆ.
ಜೆಎನ್ ಯು ಭಾಷಾ ಮತ್ತು ಸಾಹಿತ್ಯ ಶಾಲೆಯ ಎರಡು ಹಾಗೂ ಮೂರನೇ ಮಹಡಿಯ ಗೋಡೆಗಳಲ್ಲಿ, “ಬ್ರಾಹ್ಮಣರು ಕ್ಯಾಂಪಸ್ ತೊರೆಯಿರಿ, ಶಾಖಾಗೆ ಹಿಂದಿರುಗಿ, ಬ್ರಾಹ್ಮಣರೇ, ಬನಿಯಾಗಳೇ ನಾವು ನಿಮಗಾಗಿ ಬರುತ್ತಿದ್ದೇವೆ, ನಾವು ಪ್ರತಿಕಾರ ತೀರಿಸಿಕೊಳ್ಳುತ್ತೇವೆ.” ಎಂಬೆಲ್ಲಾ ಆಕ್ಷೇಪಾರ್ಹ ಘೋಷಣೆಗಳಿರುವ ವಾಕ್ಯಗಳನ್ನು ಬರೆಯಲಾಗಿದೆ. ಇದಕ್ಕೆ ಹಲವಾರು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ವಿರೋಧವನ್ನು ವ್ಯಕ್ತಪಡಿಸಿವೆ.
ಇದನ್ನೂ ಓದಿರಿ: ಕಾಂಗ್ರೆಸ್ ಎಂದಿಗೂ ರಾಮನನ್ನು ನಂಬಲಿಲ್ಲ – ಖರ್ಗೆ ‘ರಾವಣ’ ಹೇಳಿಕೆಗೆ ಪ್ರಧಾನಿ ಮೋದಿ ಟಾಂಗ್
ಈ ಕುರಿತು ಮಾತನಾಡಿರುವ ಎಬಿವಿಪಿ ಜೆಎನ್‌ಯು ಅಧ್ಯಕ್ಷ ರೋಹಿತ್ ಕುಮಾರ್, “ಕಮ್ಯುನಿಸ್ಟ್ ಗೂಂಡಾಗಳು ಶೈಕ್ಷಣಿಕ ಸ್ಥಳಗಳಲ್ಲಿ ನಡೆಸಿರುವ ಅತಿರೇಕದ ದುಷ್ಕೃತ್ಯಗಳನ್ನು ಎಬಿವಿಪಿ ಖಂಡಿಸುತ್ತದೆ. ಅಂತಾರಾಷ್ಟ್ರೀಯ ಅಧ್ಯಯನಗಳ ಶಾಲೆ-2 ರ ಕಟ್ಟಡದ ಗೋಡೆಗಳ ಮೇಲೆ ಕಮ್ಯುನಿಸ್ಟರು ನಿಂದನೆಗಳನ್ನು ಬರೆದಿದ್ದಾರೆ. ಮುಕ್ತ ಆಲೋಚನೆಯ ಪ್ರೊಫೆಸರ್‌ಗಳನ್ನು ಬೆದರಿಸಲು ಅವರ ಚೇಂಬರ್‌ಗಳನ್ನು ವಿಕೃತಗೊಳಿಸಿದ್ದಾರೆ” ಎಂದು ಹೇಳಿದ್ದಾರೆ.
ಅವರು “ಶೈಕ್ಷಣಿಕ ಸ್ಥಳಗಳು ಸಂವಾದ ಮತ್ತು ಚರ್ಚೆಗಳಿಗೆ ಬಳಸಬೇಕು ಹಾಗೂ ಸಮಾಜ ಮತ್ತು ವಿದ್ಯಾರ್ಥಿ ಸಮುದಾಯಗಳಿಗೆ ವಿಷ ಬಿತ್ತುವುದಕ್ಕೆ ಅಲ್ಲ ಎಂದು ನಾವು ನಂಬಿದ್ದೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿರಿ: 86 ನೇ ಕನ್ನಡ ಸಾಹಿತ್ಯ ಸಮ್ಮೇಳನ: ಪುಸ್ತಕ/ವಾಣಿಜ್ಯ ಮಳಿಗೆ ತೆರೆಯಲು ಇಲ್ಲಿದೆ ಮಾಹಿತಿ
ವಿಶ್ವವಿದ್ಯಾಲಯದ ಅಧಿಕಾರಿಗಳು ಹಾಗೂ ಜೆಎನ್‌ಯು ಆಡಳಿತ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬರಹಗಳ ಫೋಟೋಗಳು ವೈರಲ್ ಆಗುತ್ತಿವೆ.