ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಶೀಘ್ರವೇ ಟಿ.ವಿ. ಚಾನೆಲ್ ದರ ಶೇ.50 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಗ್ರಾಹಕರಿಗೆ ಟಿವಿ ಚಾನೆಲ್ ಗಳ ಗರಿಷ್ಠ ದರಕ್ಕೆ ಮಿತಿ ವಿಧಿಸಿರುವ ದೂರಸಂಪರ್ಕ ನಿಯಂತ್ರಕ ಟ್ರಾಯ್ ವಿರುದ್ಧ ಟಿವಿ ಚಾನೆಲ್ ಪ್ರಸಾರ ಕಂಪನಿಗಲು ಸುಪ್ರೀಂಕೋರ್ಟ್ ಗೆ ಮೊರೆ ಹೋಗಿವೆ. ಟ್ರಾಯ್ ಡಿಸೆಂಬರ್ 1 ರಿಂದ ಟಿವಿ ಚಾನೆಲ್ ಗಳ ದರದಲ್ಲಿ 12 ರೂ.ಗಳ ಮಿತಿಯನ್ನು ಅಳವಡಿಸಲು ಪ್ರಸ್ತಾಪಿಸಿತ್ತು. ಇದರ ವಿರುದ್ಧ ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಆ್ಯಂಡ್ ಡಿಜಿಟಲ್ ಫೆಡರೇಷನ್ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದೆ. ಜೊತೆಗೆ ಟಿವಿ ಚಾನೆಲ್ ಚಂದಾದಾರಿಕೆಯ ದರದಲ್ಲಿ ಏರಿಕೆ ಪ್ರಸ್ತಾಪವನ್ನು ಮುಂದಿಟ್ಟಿದೆ.
ಈ ಪ್ರಸ್ತಾವನ್ನು ಸುಪ್ರೀಂಕೋರ್ಟ್ ಸಮ್ಮತಿಸಿದರೆ ಬಳಕೆದಾರರಿಗೆ ಡಿಸೆಂಬರ್ ನಿಂದ ಕೇಬಲ್ ಟಿವಿ ಚಂದಾದಾರಿಕೆ ದರದಲ್ಲಿ ಶೇ. 50 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕ್ರೀಡೆ, ಮನೋರಂಜನೆ, ಸಿನಿಮಾ ವಾಹಿನಿಗಳ ಚಂದಾದಾರಿಕೆ ದರ 15 ರಿಂದ 30 ರೂ. ವರೆಗೆ ಹೆಚ್ಚಳವಾಗಬಹುದು. ಕೆಲವು ಬ್ರಾಡ್ ಕಾಸ್ಟ್ ಕಂಪನಿಗಳ ಹೊಸ ದರದ ಪ್ರಕಾರ ಚಾನಲ್ 15 ರಿಂದ 30 ರವರೆಗೆ ದರ ನಿಗದಿಪಡಿಸಲಾಗುವುದು ಎಂದು ಹೇಳಲಾಗುತ್ತಿದೆ.