andhra-pradesh-govt-gives-green-signal-to-distribute-bonigi-anandaiahs-herbal-covid-19-medicine

ಹೈದರಾಬಾದ್ (ಮೇ 31): ಕೊರೋನಾ ಸೋಂಕು ನಿವಾರಣೆಗೆ ಪಾರಂಪರಿಕ ನಾಟಿ ವೈದ್ಯ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂನ ಆನಂದಯ್ಯನವರು ನೀಡುತ್ತಿದ್ದ ನಾಟಿ ಮದ್ದಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆಯುಷ್ ಇಲಾಖೆಯ ವರದಿಯ ಹಿನ್ನೆಲೆಯಲ್ಲಿ ಆಂಧ್ರ ಸರಕಾರ ಈ ತೀರ್ಮಾನವನ್ನು ತೆಗೆದುಕೊಂಡಿದೆ.

ಕೊರೋನಾ ನಿವಾರಣೆಗೆ ಆನಂದಯ್ಯನವರು ನೀಡುತ್ತಿದ್ದ ನಾಟಿ ಮದ್ದು ಪರಿಣಾಮಕಾರಿ ಎಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದರು. ಇದರ ಪರಿಣಾಮವಾಗಿ ಕೊರೋನಾ ಸೋಂಕಿಗೆ ಔಷಧ ಎಂದು ಮೋಸಮಾಡಲಾಗುತ್ತಿದೆ ಎಂಬ ಕೂಗು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ತನಿಖೆಗೆ ಆದೇಶ ನೀಡಿದ್ದರು. ಸಧ್ಯ ತನಿಖೆಯ ವರದಿಯು ಸಿ ಎಂ ಕೈ ಸೇರಿದ್ದು, ಈ ಔಷಧ ಸೇವನೆಯಿಂದ ಯಾವುದೇ ಅಪಾಯವು ಉಂಟಾಗುವುದಿಲ್ಲ ಎಂದು ಆಯುಷ್ ಇಲಾಖೆ ಸ್ಪಷ್ಟ ಪಡಿಸಿದೆ. ಈ ಹಿನ್ನೆಲೆಯಲ್ಲಿ ಆಂಧ್ರ ಸರಕಾರವು ಆನಂದಯ್ಯನವರು ನೀಡುತ್ತಿದ್ದ ಪಿ ಎಲ್ ಎಫ್ ಔಷಧಕ್ಕೆ ಅನುಮತಿಯನ್ನು ನೀಡಲಾಗಿದೆ.

ಆನಂದಯ್ಯನವರ ಔಷಧ ಪಡೆದುಕೊಳ್ಳಲು ಜನರು ಸೇರಿರುವಲ್ಲಿ ಕೊರೋನಾ ಮುನ್ನೆಚ್ಚರಿಕೆಯನ್ನು ಅಗತ್ಯವಾಗಿ ತೆಗೆದುಕೊಳ್ಳಬೇಕು. ಅಲ್ಲದೇ ಸೋಂಕಿತರ ಪರವಾಗಿ ಅವರ ಮನೆಯವರು ಔಷಧ ತೆಗೆದುಕೊಂಡು ಹೋಗಬೇಕು ಎಂದು ತಿಳಿಸಿದೆ. ಈ ಮೂಲಕ ನಾಟಿ ವೈದ್ಯಕೀಯ ಔಷಧ ನೀಡುವಿಕೆಯ ಮೇಲೆ ಉಂಟಾಗಿದ್ದ ಸಮಸ್ಯೆಯೊಂದು ದೂರವಾದಂತಾಗಿದೆ.

ಇದನ್ನೂ ಓದಿರಿ: ಜೂನ್‌ನಲ್ಲಿ 10 ಕೋಟಿ ಕೋವಿಶೀಲ್ಡ್ ಡೋಸ್ ಉತ್ಪಾದಿಸಿ ಪೂರೈಸುತ್ತೇವೆ:ಸೀರಮ್ ಇನ್‌ಸ್ಟಿಟ್ಯೂಟ್

LEAVE A REPLY

Please enter your comment!
Please enter your name here