ಭಿಕ್ಷುಕ, ಕುಡುಕ ಇಂತಹ ಅಪರೂಪದ ಪಾತ್ರಗಳ ಮೂಲಕ ಪ್ರಸಿದ್ಧಿಯನ್ನು ಪಡೆದ ವೈಜನಾಥ್ ಬಿರಾದರ್ ಅವರಿಗೆ ಕರೆಮಾಡಿ ಬಾಲಿವುಡ್ ತಾರೆ ಅಮಿತಾಬ್ ಬಚ್ಚನ್ ಅಭಿನಂಧಿಸಿದ್ದಾರೆ.
ಮುಖ್ಯ ಪಾತ್ರಗಳೇ ಬೇಕು ಎಂದು ಕಾಯದೆ ತನಗೆ ದೊರೆತ ಭಿಕ್ಷುಕ, ಬಡವ, ಕುಡುಕ ಇಂತಹ 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ಮನೋಜ್ಞವಾಗಿ ನಟಿಸಿರುವ ವೈಜನಾಥ್ ಬಿರಾದರ್ ಅವರಿಗೆ ಅಂತರಾಷ್ಟ್ರೀಯ ಪ್ರಶಸ್ತಿಯು ದೊರೆತಿದೆ. ಗಿರೀಶ್ ಕಾಸರವಳ್ಳಿ ನಿರ್ದೇಶನದ ಕನಸೇನೆಂಬ ಕುದುರೆಯನೇರಿ ಎಂಬ ಚಿತ್ರಕ್ಕೆ ಈ ಪ್ರಶಸ್ತಿಯು ಅವರನ್ನು ಹುಡುಕಿಕೊಂಡು ಬಂದಿದೆ.
ಸ್ಪೇನ್ ನ ಮ್ಯಾಂಡ್ರಿಡ್ ನಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಕನಸೇನೆಂಬ ಕುದುರೆಯನೇರಿ ಚಿತ್ರದಲ್ಲಿನ ಅಭಿನಯಕ್ಕೆ ಅತ್ಯುತ್ತಮ ನಟ ಎಂಬ ಪ್ರಶಸ್ತಿಯು ಬಂದಿದೆ. ಭಾರತದಿಂದ ಸ್ಪರ್ಧಿಸಿದ್ದ ಚಿತ್ರಗಳಲ್ಲಿ ಈ ಚಿತ್ರ ಪ್ರಶಸ್ತಿ ಪಡೆದಿದ್ದು, ಹೆಮ್ಮೆಯ ಸಂಗತಿ ಎಂದು ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಕರೆಮಾಡಿ ಅಭಿನಂಧಿಸಿದ್ದಾರೆ.