ಶ್ರೀನಗರ: ಸಂವಿಧಾನದ 370 ನೇ ವಿಧಿ ರದ್ಧಾದ ಬಳಿಕ ಇದೇ ಮೊದಲ ಬಾರಿಗೆ ಜಮ್ಮು- ಕಾಶ್ಮೀರಕ್ಕೆ ಗೃಹ ಸಚಿವ ಅಮಿತ್ ಷಾ ಭೇಟಿ ನೀಡಿದ್ದಾರೆ. ದಿಡೀರ್ ಎಂದು 2019 ರಲ್ಲಿ ಉಗ್ರರಿಂದ ದಾಳಿಗೆ ಒಳಗಾದ ಪುಲ್ವಾಮಾದ ಸಿ ಆರ್ ಪಿ ಎಫ್ ಕ್ಯಾಂಪಸ್ ನಲ್ಲಿ ರಾತ್ರಿ ಕಳೆಯುವ ನಿರ್ಧಾರವನ್ನು ಮಾಡಿದ್ದಾರೆ.
2019 ರಲ್ಲಿ ಪಾಕಿಸ್ತಾನ ಪ್ರಚೋದಿತ ಭಯೋತ್ಪಾದಕ ದಾಳಿಯಲ್ಲಿ ಭಾರತೀಯ 42 ಸೈನಿಕರು ಹುತಾತ್ಮರಾಗಿದ್ದರು. ಇದೇ ಪುಲ್ವಾಮಾದ ಸಿ ಆರ್ ಪಿ ಎಫ್ ಕ್ಯಾಂಪಸ್ ನಲ್ಲಿ ಅಮಿತ್ ಷಾ ರಾತ್ರಿ ಉಳಿದುಕೊಳ್ಳುವ ನಿರ್ಧಾರವನ್ನು ಮಾಡಿದ್ದಾರೆ. ರಾತ್ರಿ ಯೋಧರೊಂದಿಗೆ ಆಹಾರವನ್ನು ಸೇವಿಸಿ ಅಲ್ಲಿಯೇ ರಾತ್ರಿಯನ್ನು ಕಳೆದಿದ್ದಾರೆ.
ಇದನ್ನೂ ಓದಿರಿ: ಇಲ್ಲಿರುವ ಎಲ್ಲ ಪುರುಷರು ಇಬ್ಬರು ಮಹಿಳೆಯರನ್ನು ಮದುವೆಯಾಗಬೇಕು: ಇಲ್ಲದಿದ್ದರೆ ಅವರಿಗೆ ಜೈಲು ಶಿಕ್ಷೆ ಖಚಿತ.!
ಅವರು ರಾತ್ರಿ ಸೈನಿಕರೊಂದಿಗೆ ಮಾತನಾಡುತ್ತ, ನಾನು ನಿಮ್ಮ ಸಮಸ್ಯೆಗಳನ್ನು ತಿಳಿದುಕೊಳ್ಳಲು ಈ ರಾತ್ರಿ ಇಲ್ಲಿಯೇ ತಂಗಲು ಬಯಸಿದ್ದೇನೆ. 2019 ರಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಗೌರವ ನೀಡುವ ಸಲುವಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಹೇಳಿದರು.