ಶೀಘ್ರದಲ್ಲೇ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಡೋಮಾಕ್ರೆಟಿಕ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಜೋ ಬಿಡೆನ್ ಹಾಗೂ ರಿಪಬ್ಲಿಕ್ ಪಕ್ಷದಿಂದ ಡೊನಾಲ್ಡ್ ಟ್ರಂಪ್ ಸ್ಪರ್ಧಿಸಲಿದ್ದಾರೆ.
ಅಮೆರಿಕ ಜ್ಯೋತಿಷಿ ಅಧ್ಯಕ್ಷೀಯ ಚುನಾವಣಾ ಕುರಿತು ಹೇಳಿದ್ದೇನು ?
2016 ರಲ್ಲಿ ಇದೆ ಜ್ಯೋತಿಷಿ ಟ್ರಂಪ್ ಗೆಲುವು ಸಾಧಿಸುತ್ತಾರೆಂದು ಹೇಳಿದ್ದು, ಅವರು ಈ ಬಾರಿ ಟ್ರಂಪ್ ಸೋಲುತ್ತಾರೆಂದು ಹೇಳಿದ್ದಾರೆ.
ಇವರು ಅಮೆರಿಕಾದ ಪ್ರಸಿದ್ಧ ಪ್ರಾಧ್ಯಾಪಕರು ಹಾಗೂ ಅಮೆರಿಕಾದ ಚುನಾವಣೆಯ ಭವಿಷ್ಯಕಾರ ಎಂದೇ ಪ್ರಖ್ಯಾತಿಗಳಿಸಿದ ಅಲ್ಲಾನ್ ಲಿಚ್ ಮ್ಯಾನ್. ಇವರು ಈವರೆಗೆ 40 ಅಧ್ಯಕ್ಷೀಯ ಚುನಾವಣೆಯ ಭವಿಷ್ಯವನ್ನು ನಿಖರವಾಗಿ ಹೇಳಿದ ಹೆಗ್ಗಳಿಕೆ ಗಳಿಸಿದ್ದಾರೆ.
ಹೇಗೆ ಈ ಭವಿಷ್ಯ ನಿರ್ಧರಿಸುತ್ತಾರೆ ?
ಇವರು ಎಲ್ಲಾ ಜ್ಯೋತಿಷಿಗಳ ಹಾಗೆ ಗ್ರಹಗಳ ಲೆಕ್ಕಹಾಕಿ ಭವಿಷ್ಯ ನುಡಿಯುವುದಿಲ್ಲ. ಬದಲಾಗಿ ಆರ್ಥಿಕತೆ, ಹಗರಣ, ಜನ ವಿರೋಧ ಹೀಗೆ 13 ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ವಿಶ್ಲೇಷಿಸಿ ಗೆಲುವು ಸೋಲುಗಳ ಲೆಕ್ಕಾಚಾರ ಹಾಕುತ್ತಾರೆ.