ಅಮೇರಿಕಾ ಕೊರೊನಾ ಸೋಂಕಿಗೆ ನಲುಗಿಹೋಗಿದ್ದು, ಸೋಂಕಿತರ ಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದೆ. ಮಹಾಮಾರಿ ಕೊರೊನಾ ಅಮೆರಿಕಾದಲ್ಲಿ ತನ್ನ ರೌದ್ರ ನರ್ತನ ತೋರುತ್ತಿದ್ದು, ಸೋಂಕು ಹರಡುವಿಕೆಯನ್ನು ತಡೆಗಟ್ಟುವುದು ತುಂಬಾ ಕಷ್ಟದ ಕೆಲಸವಾಗಿದೆ.
ಚೀನಾ ತಾನು ನೀಡಿರುವ ಅಧಿಕೃತ ಸಂಖ್ಯೆಯ ಪ್ರಕಾರ ಇದುವರೆಗೆ ಸುಮಾರು 81,340 ಜನರಿಗೆ ಸೋಂಕು ತಗುಲಿದೆ. ಆದರೆ ಇಂದಿನ ಅಮೆರಿಕಾದ ಸೋಂಕಿತರ ಪಟ್ಟಿಯ ಪ್ರಕಾರ 85,520 ಆಗಿದೆ. ಈ ಮೂಲಕ ಇದರ ಹರಡುವಿಕೆಯೂ ಎಷ್ಟು ವೇಗವಾಗಿದೆ ಎಂದು ಗಮನಿಸಬಹುದಾಗಿದೆ. ಚೀನಾದಲ್ಲಿ ಇದುವರೆಗೆ 3,296 ಮಂದಿ ಕರೊನಾ ಸೋಂಕಿನಿಂದ ಮರಣಹೊಂಡಿದ್ದರೆ, ಅಮೆರಿಕಾದಲ್ಲಿ 1,297 ಮಂದಿ ಬಲಿಯಾಗಿದ್ದಾರೆ.
ಇದನ್ನೂ ಓದಿರಿ: ಕರೋನಾ ಬಗ್ಗೆ ಭಯ ಬೇಡ..! ಆದರೆ ಈ ವೈರಸ್ ಬಗ್ಗೆ ಜಾಗ್ರತಿಯಂತೂ ಅವಶ್ಯ..!
ಮಹಾಮಾರಿ ಕರೊನಾ ಸೋಂಕು 199 ದೇಶಗಳಿಗೆ ಹಬ್ಬಿದ್ದು, ಸದ್ಯ 5.32 ಲಕ್ಷ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಸೋಂಕಿಗೆ ಒಳಗಾಗಿ ಪ್ರಾಣ ಕಳೆದುಕೊಂಡವರ ಪಟ್ಟಿಯಲ್ಲಿ ಇಟಲಿ ಮೊದಲ ಸ್ಥಾನದಲ್ಲಿದ್ದು, ಇದುವರೆಗೆ 8,215 ಜನರು ಬಲಿಯಾಗಿದ್ದಾರೆ.