ಬೆಂಗಳೂರು: ದಿವಂಗತ ಸಿದ್ದಾರ್ಥ್ ಹೆಗಡೆ ಪುತ್ರ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಮೊಮ್ಮಗ ಅಮಾರ್ತ್ಯ ಹೆಗಡೆ ಮತ್ತು ಡಿಕೆಶಿ ಪುತ್ರಿ ಐಶ್ವರ್ಯ ಅವರ ವಿವಾಗದ ದಿನಾಂಕವು ನಿಗದಿಯಾಗಿದೆ.
ಕಳೆದ ಎಪ್ರಿಲ್ 15 ರಂದು ಅಮಾರ್ತ್ಯ ಹೆಗಡೆ ಮತ್ತು ಐಶ್ವರ್ಯ ಅವರ ನಿಶ್ಚಿತಾರ್ಥ್ ನನ ನೆರವೇರಿಸಲಾಗಿತ್ತು. ಇದೀಗ ಮದುವೆ ದ ದಿನಾಂಕ ನಿಗದಿಯಾಗಿದ್ದು, 2021 ರ ಫೆಬ್ರವರಿ 14 ಅಥವಾ 24 ರಂದು ಇವರ ವಿವಾಹ ನೆರವೇರಿಸಲು ಕುಟುಂಬದವರು ನಿಶ್ಚಯಿಸಿದ್ದಾರೆ ಎನ್ನಲಾಗಿದೆ. ಈ ಎರಡು ದಿನಗಳು ಇವರ ಮದುವೆಗೆ ಪ್ರಶಸ್ತವಾಗಿದ್ದು, ಅನುಕೂಲ ಮತ್ತು ಕರೋನಾ ಪರಿಸ್ಥಿತಿ ಆಧರಿಸಿ ಯಾವುದಾದರೂ ಒಂದು ದ ದಿನಾಂಕವನ್ನು ನ ನಿಗದಿ ಮಾಡಲಿದ್ದಾರೆ.
ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಲು ಬಯಸಿದ್ದು, ಕೊರೊನಾ ಸಮಸ್ಯೆ ಇರುವುದರಿಂದ ಪರಿಸ್ಥಿತಿ ಆಧರಿಸಿ ವ್ಯವಸ್ಥೆ ಮಾಡಿಕೊಳ್ಳಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿವಾಹ ನಡೆಯುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.