ಜಮ್ಮು ಮತ್ತು ಕಾಶ್ಮೀರ: ಈ ಬಾರಿಯ ಅಮರನಾಥ ಯಾತ್ರೆಯು ಜೂನ್ 28 ರಿಂದ ಆರಂಭವಾಗಲಿದೆ ಎಂದು ಅಧಿಕಾರಿಗಳ ಮೂಲದಿಂದ ತಿಳಿದುಬಂದಿದೆ. ಜಮ್ಮು-ಕಾಶ್ಮೀರದಲ್ಲಿನ ವಿಶೇಷ ಸ್ಥಾನಮಾನ ಹಿಂತೆಗೆದುಕೊಂಡ ಬಳಿಕ ಇದೇ ಮೊದಲ ಬಾರಿಗೆ ಅಮರನಾಥ ಯಾತ್ರೆಗೆ ಅವಕಾಶ ನೀಡಲಾಗಿದೆ.
ಕಳೆದ ಬಾರಿ ದೇಶದಲ್ಲಿ ಕರೋನ ಸಂಕ್ರಾಮಿಕ ಕಾರಣದಿಂದಾಗಿ ಯಾತ್ರೆಗೆ ಅವಕಾಶವಿರಲಿಲ್ಲ. ಆದರೆ ಈ ಬಾರಿ ಜೂನ್ 28 ರಿಂದ ಅಮರನಾಥ ಯಾತ್ರೆಗೆ ಅವಕಾಶ ನೀಡಲಾಗುವುದು ಎಂದು ಗೌರ್ನರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಅಮರನಾಥ ದೇವಾಲಯ ಸಮುದ್ರಮಟ್ಟದಿಂದ 13500 ಅಡಿಗಳಷ್ಟು ಎತ್ತರದಲ್ಲಿ ಇದ್ದು ಇಲ್ಲಿಗೆ ಪ್ರತಿ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ತೀರ್ಥಯಾತ್ರೆಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ.