all-party-meeting-on-india-china-clash-sonia-gandhi-questions-to-government

ನವದೆಹಲಿ: ಭಾರತ-ಚೀನಾ ಗಡಿಯಲ್ಲಿನ ಪರಿಸ್ಥಿತಿಯ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಕರೆದ ಸರ್ವಪಕ್ಷ ಸಭೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಈ ಸೂಕ್ಷ್ಮ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಡಿಜಿಟಲ್ ಸಭೆಯ ಆರಂಭದಲ್ಲಿ ಈ ಹಿಂದೆ ಪೂರ್ವ ಲಡಾಖ್ ನಲ್ಲಿ ಚೀನಾದ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಹುತಾತ್ಮರಾದ 20 ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಲಾಯಿತು.

ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಮೊದಲು ಮಾತನಾಡಿದರು, “ಹಿಂಸಾತ್ಮಕ ಘರ್ಷಣೆಯಲ್ಲಿ ಹುತಾತ್ಮರಾದ ಸೈನಿಕರಿಗೆ ಗೌರವ ಸಲ್ಲಿಸಿದ ನಂತರ ಮಾತನಾಡಿ, ಎರಡು ವಾರಗಳ ಹಿಂದೆಯೇ ಚೀನಾ ಲಡಾಖ್ ಪ್ರದೇಶದಲ್ಲಿ ಒಳನುಸುಳಲು ಪ್ರಯತ್ನಸಿದಾಗಲೇ ಈ ಸಭೆಯನ್ನು ಕರೆಯುವ ಅವಶ್ಯಕತೆಯಿತ್ತು ಎಂದು ನಾನು ಭಾವಿಸುತ್ತೇನೆ. ಬಿಕ್ಕಟ್ಟಿನ ಪ್ರಮುಖ ಅಂಶಗಳ ಬಗ್ಗೆ  ನಾವಿನ್ನೂ ಕತ್ತಲೆಯಲ್ಲಿ ಇದ್ದೇವೆ” ಎಂದರು.

ಇದನ್ನೂ ಓದಿರಿ: ಭಾರತದ ಒಂದಿಂಚು ಭೂಮಿಯ ಮೇಲು ಕಣ್ಣಾಕಲು ಬಿಡುವುದಿಲ್ಲಾ- ಸರ್ವಪಕ್ಷ ಸಭೆಯಲ್ಲಿ ಮೋದಿ

“ನಾವು ಸರಕಾರಕ್ಕೆ ಕೆಲವೊಂದು ಪ್ರಶ್ನೆಗಳನ್ನು ಕೇಳಲು ಬಯಸುತ್ತೇವೆ. ಯಾವ ದಿನಾಂಕದಂದು ಚೀನಾ ಸೈನಿಕರು ಲಡಾಖ್ ಗಡಿಯನ್ನು ಪ್ರವೇಶಿಸಿದರು. ಸರಕಾರಕ್ಕೆ ಈ ಮಾಹಿತಿ ಯಾವಾಗ ಸಿಕ್ಕಿತು ?, ಗಡಿ ಪ್ರದೇಶದ ಉಪಗ್ರಹ ಚಿತ್ರವನ್ನು ಸರಕಾರ ಆಗಾಗ ಪಡೆಯುವುದಿಲ್ಲವೇ ?, ಈ ಕುರಿತು ಏನ್.ಎ.ಸಿ. ಗುಪ್ತಚರರು ಮತ್ತು ಮಿಲಿಟರಿ ಗುಪ್ತಚರರು ಮಾಹಿತಿ ನೀಡಲಿಲ್ಲವೇ?” ಎಂಬ ಮಹತ್ವದ ಪ್ರಶ್ನೆಗಳನ್ನು ಸಭೆಯಲ್ಲಿ ಸೋನಿಯಾ ಎತ್ತಿದ್ದಾರೆ.

ಸೋನಿಯಾ ಗಾಂಧಿಯವರು, ” ಮೇ 5 ಮತ್ತು ಜೂನ್ 6 ರ ನಡುವೆ ನಿರ್ಣಾಯಕ ಸಮಯ ಕಳೆದಿದೆ ಎಂದು ಕಾಂಗ್ರೆಸ್ ನಂಬುತ್ತದೆ. ಜೂನ್ 6 ರ ನಂತರವೂ ರಾಜಕೀಯ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಸಂವಾದ ನಡೆಯಬೇಕಿತ್ತು. 20 ಜೀವಗಳು ಮತ್ತು ಡಜನ್ ಗಟ್ಟಲೆ ಗಾಯಗಳಿಗೆ ಕಾರಣವಾಗುವ ಮೂಲಕ ಈ ಮಾರ್ಗವನ್ನು ಬಳಸುವಲ್ಲಿ ನಾವು ವಿಫಲರಾಗಿದ್ದೇವೆ” ಎಂದು ಹೇಳಿದರು.

ಈ ಎಲ್ಲ ಮಾಹಿತಿಗಳನ್ನು ಪ್ರಧಾನಿ ಮೋದಿಯವರು ಹಂಚಿಕೊಳ್ಳಬೇಕೆಂದು ಮನವಿಮಾಡಿಕೊಳ್ಳುತ್ತ, “ಸರಕಾರ ಮುಂದೇನು ಮಾಡುತ್ತದೆ ?, ಸರಕಾರದ ನಡೆಯನ್ನು ಸ್ಪಷ್ಟಪಡಿಸಬೇಕು ಹಾಗೂ ಗಡಿಯಲ್ಲಿನ ಯತಾಸ್ಥಿತಿ ಪುನಃ ಸ್ಥಾಪನೆಯಾಗುವುದು ಮತ್ತು ಚೀನಾವು ಎಲ್.ಎ.ಸಿ. ಯ ಹಳೆಯಸ್ಥಾನಕ್ಕೆ ಮರಳುವುದು ಎನ್ನುವ ಖಚಿತ ಭರವಸೆಯನ್ನು ದೇಶ ಬಯಸುತ್ತದೆ” ಎಂದು ಹೇಳಿದರು.

all-party-meeting-on-india-china-clash-sonia-gandhi-questions-to-government

ಕಾಂಗ್ರೆಸ್ ಮತ್ತು ಎಲ್ಲ ಪ್ರತಿಪಕ್ಷಗಳು ಸೇನೆಯೊಂದಿಗೆ ಸದಾ ಇದ್ದೇವೆ. ಸರಕಾರ ವಿಶ್ವಾಸದಿಂದ ಕೆಲಸಮಾಡುತ್ತದೆ ಮತ್ತು ದೇಶಕ್ಕೆ ಹಾಗೂ ಪ್ರತಿಪಕ್ಷಗಳಿಗೆ ಕಾಲಕಾಲಕ್ಕೆ ಮಾಹಿತಿಯನ್ನು ನೀಡುತ್ತದೆ ಎಂದು ನೀರಿಕ್ಷಿಸುತ್ತೇವೆ ಎಂದು ಹೇಳಿದರು.

ಸಭೆಯ ಆರಂಭದಲ್ಲಿ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಜೈಶಂಕರ್, ಎಲ್ಲ ರಾಜ್ಯಗಳ  ಮುಖ್ಯಮಂತ್ರಿಗಳು ಮತ್ತು  ಪ್ರತಿಪಕ್ಷಗಳು ಹುತಾತ್ಮ ಯೋಧರ ಗೌರವಾರ್ಥ ಮೌನವಾಗಿ ಎದ್ದುನಿಂತರು. ಮೊದಲಿಗೆ ಜೈಶಂಕರ್ ಮತ್ತು ರಾಜನಾಥ್ ಸಿಂಗ್ ಸೇನೆಯ ಮುಖಾಮುಖಿ ಕುರಿತು ಮಾತನಾಡಿದರು. ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಏನ್.ಸಿ.ಪಿ. ಅಧ್ಯಕ್ಷ ಶರದ್ ಪವಾರ್, ಟಿ.ಅರ್.ಎಸ್. ಮುಖಂಡ ಕೆ ಚಂದ್ರಶೇಖರ್ ರಾವ್, ಜೆ.ಡಿ.ಯು. ಮುಖಂಡ ನಿತೇಶ್ ಕುಮಾರ್, ಡಿ.ಎಂ.ಕೆ. ಎಂ.ಕೆ. ಸ್ಟಾಲಿನ್, ವೈ.ಎಸ್.ಆರ್. ಕಾಂಗ್ರೆಸ್ ನಿಂದ ಜಗನ್ ಮೋಹನ್ ರೆಡ್ಡಿ, ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here