all-party-meeting-of-pm-narendra-modi-on-india-china-tussle

ನವದೆಹಲಿ: ವಾಸ್ತವಿಕ ಗಡಿ ಪ್ರದೇಶದಲ್ಲಿನ ಮಿಲಿಟರಿ ಹಿಂಸಾತ್ಮಕ ಗಟನೆ ನಂತರ ಸೃಷ್ಟಿಯಾದ ಪರಿಸ್ಥಿತಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷ ಸಭೆಯನ್ನು ಕರೆದಿದ್ದರು. ಪೂರ್ವ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಚಕಮಕಿಯಲ್ಲಿ ಭಾರತೀಯ 20 ಯೋಧರು ಹುತಾತ್ಮರಾಗಿದ್ದರು.

ಶುಕ್ರವಾರ ವಿಡಿಯೋ ಕಾನ್ಪರೆನ್ಸ್ ಮೂಲಕ 17 ಕ್ಕೂ ಹೆಚ್ಚು ಪಕ್ಷಗಳು ಮತ್ತು ಎಲ್ಲರಾಜ್ಯಗಳ ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯ ಪ್ರಾರಂಭದಲ್ಲಿ ಲಡಾಖ್ ಗಾಲ್ವಾನ್ ಪ್ರಾಂತ್ಯದಲ್ಲಿ ಹುತಾತ್ಮರಾದ ಯೋಧರಿಗೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರದ ಸಚಿವರು ಎದ್ದು ನಿಂತು ಗೌರವ ಸಲ್ಲಿಸಿದರು. ಪೂರ್ವ ಲಡಾಖ್ ನ ಈ ಘರ್ಷಣೆಯ ಸಂಪೂರ್ಣ ಮಾಹಿತಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ ಎಲ್ಲರೊಂದಿಗೆ ಹಂಚಿಕೊಂಡರು.

ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಪ್ರಧಾನಿ, ನಾವು ಕೆಚ್ಚೆದೆಯ ಸೈನಿಕರ ಹಿಂದೆ ಸದಾ ಇದ್ದೇವೆ, ಅವರ ಧೈರ್ಯದ ಬಗ್ಗೆ ದೇಶಕ್ಕೆ ಅಚಲ ನಂಬಿಕೆಯಿದೆ. ಹುತಾತ್ಮ ಯೋಧರ ಕುಟುಂಬಗಳ ಬೆನ್ನಿಗೆ ಇಡೀ ದೇಶವೇ ಇದೆ ಎಂದು ಭರವಸೆ ನೀಡುತ್ತೇನೆ. ಭಾರತೀಯ ಯೋಧರ ಹೋರಾಟವನ್ನು ವ್ಯರ್ಥವಾಗಲು ಬಿಡುವುದಿಲ್ಲ ಎಂದು ಹೇಳಿದರು. ಇದೆ ಸಂದರ್ಭದಲ್ಲಿ ಮೊನ್ನೆ ಘರ್ಷಣೆ ನಡೆದ ಪೂರ್ವ ಲಡಾಖ್ ಪ್ರದೇಶದಲ್ಲಿ ಅತಿಕ್ರಮಣ ಗಡಿ ಪ್ರವೇಶ ನಡೆದಿಲ್ಲಾ ಎಂದು ಸ್ಪಸ್ಟ ಪಡಿಸಿದರು.


ದೇಶದ ತಂಟೆಗೆ ಬಂದರೆ ಪರಿಣಾಮ ನೆಟ್ಟಗಿರುವುದಿಲ್ಲಾ ಎಂಬ ಪ್ರಧಾನಿಯವರ ಮಾತಿಗೆ ಸರ್ವಪಕ್ಷ ಸಭೆಯಲ್ಲಿ ಒಕ್ಕೊರಲಿನ ಬೆಂಬಲ ವ್ಯಕ್ತವಾಗಿದೆ. ಜಗನ್ ಮೋಹನ್ ರೆಡ್ಡಿ ಮಾತನಾಡಿ, “ಪ್ರಧಾನಿ ನರೇಂದ್ರ ಮೋದಿ ನಮ್ಮ ಶಕ್ತಿ, ಭಾರತದ ಖ್ಯಾತಿ ಜಾಗತಿಕವಾಗಿ ಹೆಚ್ಚಾಗಿದೆ.  ಚೀನಾ ಇದನ್ನು ಅಸ್ತಿರಗೊಳಿಸಲು ಪ್ರಯತ್ನಿಸುತ್ತಿದೆ” ಎಂದು ಹೇಳಿದರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಿ, “ಭಾರತ ಚೀನಾದ ಎದುರಿಗೆ ಎಂದಿಗೂ ತಲೆಬಾಗುವುದಿಲ್ಲಾ, ಚೀನಾದಲ್ಲಿ ಸರ್ವಾಧಿಕಾರಿ ಆಡಳಿತ ನಡೆಯುತ್ತಿದೆ, ಯಾವಾಗ ಬೇಕಾದರೂ ಎಂತಹ ನಿರ್ಧಾರಕ್ಕೆ ಅಲ್ಲಿನ ಸರಕಾರ ಬರಬಹುದು. ಆದ್ದರಿಂದ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡಬೇಕಿದೆ” ಎಂದು ಹೇಳಿದರು.

LEAVE A REPLY

Please enter your comment!
Please enter your name here