ಮುಂಬೈ: ಭಾನುವಾರ ಬೆಳಗ್ಗೆ ಮುಂಬೈನ ಗಿರ್ಗಾಂವ್‌ನಲ್ಲಿರುವ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಹೆಣ್ಣು (Alia Bhatt) ಮಗುವಿಗೆ ಜನ್ಮ ನೀಡಿದ್ದಾರೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ತಂದೆ-ತಾಯಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕಳೆದ ಏಪ್ರಿಲ್ 14 ರಂದು ವಿವಾಹ ಜೀವನಕ್ಕೆ ಪಾದಾರ್ಪಣೆ ಮಾಡಿದ್ದರು. ಇನ್ನು ಜೂನ್ ನಲ್ಲಿ ಆಲಿಯಾ ತಮ್ಮ ಇನ್ಸ್ಟಾ ಗ್ರಾಮ್ ಹ್ಯಾಂಡಲ್ ನಲ್ಲಿ ತಾವು ರಣಬೀರ್ ಜೊತೆ ಇರುವ ಫೋಟೋದೊಂದಿಗೆ ತಾನು ಗರ್ಭಿಣಿ ಎಂದು ಘೋಷಿಸುವ ಮೂಲಕ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದರು.
ಮೂಲಗಳ ಪ್ರಕಾರ ನವೆಂಬರ್ ಕೊನೆಯ ವಾರ ಅಥವಾ ಡಿಸೇಂಬರ್ ನಲ್ಲಿ ಡೆಲಿವರಿ ಆಗಬಹುದೆಂದು ಹೇಳಲಾಗಿತ್ತು. ಆದರೆ ಏಳು ತಿಂಗಳಿಗೆ ಆಲಿಯಾ – ರಣಬೀರ್ ಹೆಣ್ಣುಮಗುವಿನ ತಂದೆ-ತಾಯಿಯಾಗಿ ಪ್ರಮೋಷನ್ ಪಡೆದುಕೊಂಡಿದ್ದಾರೆ.
ಈ ಜೋಡಿ ಇತ್ತೀಚಿಗೆ ಸಿಮಂತ ಶಾಸ್ತ್ರದ ಕಾರ್ಯಕ್ರಮವನ್ನು ಆಯೋಜಿಸಿದ್ದು, ಬೇಬಿ ಬಂಪ್ ಫೋಟೋ ಶೇರ್ ಮಾಡುವ ಮೂಲಕ ಸುದ್ದಿಯಾಗಿದ್ದರು.
ಇದನ್ನೂ ಓದಿರಿ: ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಆಲಿಯಾ ಭಟ್ ! (ವಿಡಿಯೋ ನೋಡಿ)