ನವದೆಹಲಿ : ಈಶಾನ್ಯ ಹಾಗೂ ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ಸೆ. 24 ರಂದು ಒತ್ತಡ ರೂಪುಗೊಳ್ಳುವ ಸಾಧ್ಯತೆಯಿರುವುದರಿಂದ ಮುಂಗಾರು ಮತ್ತೆ ತೀವ್ರಗೊಳ್ಳುವ ಶಂಖ್ಯೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಉತ್ತರಾಖಂಡ್ ಹಾಗೂ ಪೂರ್ವ ಉತ್ತರ ಪ್ರದೇಶಗಳಲ್ಲಿ ಭಾನುವಾರದ ವರೆಗೆ ತೀವ್ರ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಆ ನಂತರದಲ್ಲಿ ಮುಂಗಾರು ತನ್ನ ಸಾಮಾನ್ಯ ಸ್ಥಿತಿಗೆ ಮರಳಲಿದ್ದು, ದಕ್ಷಿಣದ ಕಡೆಗೆ ಚಲಿಸಲಿದೆ ಎಂದು ಹೇಳಲಾಗಿದೆ. ಮುಂದಿನ ಐದು ದಿನಗಳವರೆಗೆ ಇದರ ಪ್ರಭಾವ ತೀವ್ರವಾಗಿರಬಹುದು ಎಂದು ಹೇಳಲಾಗಿದೆ.
ಮುಂದಿನ 48 ಗಂಟೆಗಳಲ್ಲಿ ಮಾರುತಗಳು ಒಡಿಶಾ ಕರಾವಳಿಯ ಕೆಡೆಗೆ ಚಲಿಸಲಿದ್ದು, ಪಶ್ಚಿಮ ವಾಯುವ್ಯ ದಿಕ್ಕಿನೆಡೆಗೆ ಸಾಗಲಿವೆ ಎಂದು ಅಂದಾಜಿಸಲಾಗಿದೆ. ಇದರ ಪರಿಣಾಮವಾಗಿ ಶನಿವಾರದಿಂದ ಒಡಿಶಾ ಸುತ್ತಮುತ್ತಲಿನ ನೆರೆಹೊರೆಯ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಈ ಬಾರಿ ದೇಶದಲ್ಲಿ ಮುಂಗಾರು ಅಂತ್ಯ ಇನ್ನಷ್ಟು ವಿಳಂಬವಾಗಲಿದೆ. ವಾಡಿಕೆಗಿಂತ ಈ ಬಾರಿ ಸೆಪ್ಟೆಂಬರ್ ನಲ್ಲಿ ಶೇಕಡಾ 27 % ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಸಾಮಾನ್ಯವಾಗಿ ಸೆಪ್ಟೆಂಬರ್ ಗೆ ಕಡಿಮೆಯಾಗಬೇಕಿದ್ದ ಮಳೆಗಾಲ ಈ ಬಾರಿ ಅಕ್ಟೋಬರ್ ವರೆಗೂ ಮುಂದುವರೆಯಲಿದೆ ಎಂದು ಹೇಳಲಾಗಿದೆ.