86 ನೇ ಕನ್ನಡ ಸಾಹಿತ್ಯ ಸಮ್ಮೇಳನ: ಪುಸ್ತಕ/ವಾಣಿಜ್ಯ ಮಳಿಗೆ ತೆರೆಯಲು ಇಲ್ಲಿದೆ ಮಾಹಿತಿ

akhila-bharata-kannada-sahitya-sammelana-2022

ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2023 ಜನವರಿ 6 ರಿಂದ ಮೂರು ದಿನಗಳ ಕಾಲ ಹುಬ್ಬಳ್ಳಿ-ಹಾವೇರಿ ಮುಖ್ಯರಸ್ತೆಯ ಆರ್ ಟಿ ಓ ಕಚೇರಿ ಸಮೀಪದ ಅಜ್ಜಯ್ಯನ ದೇವಸ್ಥಾನದ ಎದುರಿನ ಸ್ಥಳದಲ್ಲಿ ನಡೆಯಲಿದೆ. ಈ ಸ್ಥಳದಲ್ಲಿ ಪುಸ್ತಕ/ವಾಣಿಜ್ಯ ಮಳಿಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ/ವಾಣಿಜ್ಯ ಮಳಿಗೆಗಳನ್ನು ತೆರೆಯಲು ಅವಕಾಶವನ್ನು ಮಾಡಿಕೊಡಲಾಗಿದೆ. ಪುಸ್ತಕ ಮಳಿಗೆಗಳಲ್ಲಿ ಕೇವಲ ಕನ್ನಡ ಪುಸ್ತಕಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶವಿದೆ. ಪುಸ್ತಕ ಮಳಿಗೆಗಳನ್ನು ತೆರೆಯಲು 3000 ರೂ. ಯನ್ನು “ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ” (ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ) ಮೊಬೈಲ್ ಆಫ್ ಮೂಲಕ ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದು.

ವಾಣಿಜ್ಯ ಮಳಿಗೆಗಳನ್ನು ತೆರೆಯಲು 5000 ಶಿಲ್ಕ ಪಾವತಿಸಬೇಕಾಗುತ್ತದೆ. ಮಳಿಗೆಗಳನ್ನು ನೋಂದಾಯಿಸಿಕೊಳ್ಳಲು ಡಿಸೇಂಬರ್ 18, 2022 ರ ವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಮಳಿಗೆಗಳನ್ನು ತೆರೆಯುವವರಿಗೆ ಎರಡು ಟೇಬಲ್, ಎರಡು ಕುರ್ಚಿ, ವಿದ್ಯುತ್ ವ್ಯವಸ್ಥೆ ಸಮೀತಿಯ ವತಿಯಿಂದಲೇ ಒದಗಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಳಿಗೆಗಳನ್ನು ತೆರೆಯಲು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಹೊಂದಿರುವುದು ಅವಶ್ಯವಾಗಿದೆ. ಸದಸ್ಯತ್ವ ಪಡೆದುಕೊಳ್ಳಲು ಮೊಬೈಲ್ ಆಫ್ (Kasapa App) ಮೂಲಕ ಆನ್ ಲೈನ್ ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. (ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ) ಮಳಿಗೆಗಳನ್ನು ತೆರೆಯಲು ಇನ್ನೂ ಹಲವಾರು ಶರತ್ತುಗಳಿದ್ದು, ಅವುಗಳನ್ನು ಕೆಳಗಿನ ಪ್ರಕಟಣೆಯಲ್ಲಿ ನೋಡಬಹುದಾಗಿದೆ.

akhila-bharata-kannada-sahitya-sammelana-2022-1

akhila-bharata-kannada-sahitya-sammelana-2022

LEAVE A REPLY

Please enter your comment!
Please enter your name here