ಸ್ಯಾಂಡಲ್ ವುಡ್ ರೊಮ್ಯಾಂಟಿಕ್ ಜೋಡಿ ದಿಗಂತ್ ಮತ್ತು ಐಂದ್ರಿತಾ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಮದುವೆ ಯಾವಾಗ ಆಗುತ್ತಾರೆ ಎಂದು ಅಭಿಮಾನಿಗಳಲ್ಲಿ ಕುತೂಹಲ ಉಂಟುಮಾಡಿತ್ತು.
ಪ್ರೀತಿಸುತ್ತಿದ್ದ ಜೋಡಿ ತಮ್ಮ ತಮ್ಮ ಬಿಡುವಿಲ್ಲದ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಆದರೆ ಈಗ ತಮ್ಮ ಮದುವೆಯ ದಿನಾಂಕವನ್ನು ಐಂದ್ರಿತಾ ಗರುಡಾ ಸಿನಿಮಾ ಶೂಟಿಂಗ್ ಸೆಟ್ಟನಲ್ಲಿ ಅನೌನ್ಸ್ ಮಾಡುವ ಮೂಲಕ ಎಲ್ಲರಿಗೂ ತಿಳಿಸಿದ್ದಾರೆ. ಬೆಂಗಾಲಿ ಬೆಡಗಿ ಐಂದ್ರಿತಾ ರೈ ಮತ್ತು ದೂದ್ ಪೇಡಾ ದಿಗಂತ ಮದುವೆಯಾಗಲಿದ್ದು, ಡಿಸೆಂಬರ್ 11 ಮತ್ತು 12 ರಂದು ದಿನಾಂಕವನ್ನು ಗೊತ್ತು ಮಾಡಿದ್ದಾರೆ.
ಸಿನಿಮಾ ಶೂಟಿಂಗ್ ಮಾಡುತ್ತಿದ್ದ ವೇಳೆ ಐಂದ್ರಿತಾ ಅವರು ಎಲ್ಲರನ್ನು ಕರೆದು ಈ ವಿಚಾರವನ್ನು ಕೂಗಿ ಹೇಳಿದ್ದಾರೆ. ಆ ಸಂದರ್ಭದಲ್ಲಿ ಹಿರಿಯ ನಟ ರಂಗಾಯಣ ರಘು ಅವರು ಹಾಜರಿದ್ದರು.