aiims-patna-begins-human-trial-of-indias-first-covid-19-vaccine

ಪಾಟ್ನಾ: ಕೊರೊನಾ ವೈರಸ್ ಹಾವಳಿ ಹೆಚ್ಚುತ್ತಿದ್ದಂತೆ ಇದಕ್ಕೆ ವ್ಯಾಕ್ಸಿನ್ ಕಂಡು ಹಿಡಿಯುವ ಪ್ರಕ್ರೀಯೆಯೂ ಜೋರಾಗಿಯೇ ನಡೆಯುತ್ತಿದೆ. ಭಾರತವೇನು ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಈಗ ಭಾರತದಲ್ಲಿ COVAXIN ಲಸಿಕೆಯ ಪ್ರಯೋಗ ಮಾನವನ ಮೇಲೆ ನಡೆಯುತ್ತಿದೆ. ಮಾನವನ ಮೇಲೆ ವ್ಯಾಕ್ಸಿನ್ ಪ್ರಯೋಗ ನಡೆಸಲು ಐಸಿಎಂಆರ್ ನಿಂದ ಅನುಮತಿ ಪಡೆದಿರುವ ತಂಡ ಏಮ್ಸ್ ಆಸ್ಪತ್ರೆಯಲ್ಲಿ ಅಗತ್ಯ ಸಿದ್ದತೆಯನ್ನು ಮಾಡಿಕೊಂಡಿದೆ.
ಮೂರು ಹಂತಗಳಲ್ಲಿ ಈ ಪರೀಕ್ಷೆಯು ನಡೆಯಲಿದ್ದು, ಎಲ್ಲದರಲ್ಲಿಯೂ ಯಶಸ್ವಿಯಾದಲ್ಲಿ ಜನಸಾಮಾನ್ಯರಿಗೆ ಲಸಿಕೆಯನ್ನು ನೀಡಲಾಗುತ್ತದೆ. ಲಸಿಕೆಯನ್ನು ಪ್ರಯೋಗ ಹಂತದಲ್ಲಿ, ಸ್ವಯಂ ಪ್ರೇರಿತರಾಗಿ ಬರುವ ಆರೋಗ್ಯವಂತ 22 ರಿಂದ 55 ವರ್ಷ ಒಳಗಿನ ವ್ಯಕ್ತಿಗಳಿಗೆ ಚುಚ್ಚು ಮದ್ದನ್ನು ನೀಡಿ, ಪ್ರತಿಯೊಂದು ಬದಲಾವಣೆಯನ್ನು ಗಮನಿಸಲಾಗುತ್ತದೆ. ಇದು ಯಶಸ್ವಿಯಾದ ನಂತರ ಇಂತಹದೇ ಆದರೆ ಡೋಸೆಜ್ ಬದಲಾವಣೆಗಳನ್ನು ಮಾಡಿ ಪ್ರಯೋಗ ಮಾಡಲಾಗುತ್ತದೆ. ಈ ರೀತಿಯಾಗಿ ಮೂರು ಬಾರಿ ವಿವಿಧ ಸ್ಥರಗಳಲ್ಲಿ ಅಧ್ಯಯನ ನಡೆಸಿ ಯಶಸ್ವಿಯಾದ ಲಸಿಕೆಯನ್ನು ಜನಸಾಮಾನ್ಯರಿಗೆ ರೋಗ ನಿಯಂತ್ರಣಕ್ಕಾಗಿ ನೀಡಲಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯಂತೆ ಇಂತಹ ವ್ಯಾಕ್ಸಿನ್ ಗಳ ಅಭಿವೃದ್ಧಿ ಕಾರ್ಯ ಜಗತ್ತಿನಾದ್ಯಂತ ನಡೆದಿದ್ದು, ಒಟ್ಟು 19 ವ್ಯಾಕ್ಸಿನ್ ತಯಾರಾಗಿದೆ. ಇವುಗಳಲ್ಲಿ ಆಸ್ಟ್ರಾಝೆನೆಕಾ ಮತ್ತು ಸಿನೋವಾಕೇರ್ ಎಂಬ ಎರಡು ಲಸಿಕೆಗಳ ಮೂರನೇ ಹಂತದ ಟೆಸ್ಟ್ ನಡೆಸಲಾಗುತ್ತಿದೆ. ಇನ್ನು ವಿವಧ ದೇಶಗಳ ಒಟ್ಟು 6 ಲಸಿಕೆಗಳು ಎರಡನೆಯ ಹಂತದ ಪ್ರಯೋಗಗಳನ್ನು ನಡೆಸುತ್ತಿವೆ. ಇವುಗಳ ಮದ್ಯೆ ನಮ್ಮದೇಶದ ಕೊವ್ಯಾಕ್ಸಿನ್ ಮೊದಲ ಹಂತದ ಪ್ರಯೋಗದಲ್ಲಿದೆ.

ಸದ್ಯ ಇಂತಹ ಪ್ರಯೋಗಗಳು ಬಿಹಾರದ ಏಮ್ಸ್ ಆಸ್ಪತ್ರೆಯಲ್ಲಿ ನಡೆಸಲಾಗುತ್ತಿದ್ದು, ಮೊದಲ 10 ಜನರ ಮೇಲೆ ಪ್ರಯೋಗಿಸಲಾಗುತ್ತದೆ. ನಂತರದಲ್ಲಿ 14 ದಿನಗಳ ಕಾಲ ಪರಿಶೀಲಿಸಿ ಎರಡನೆಯ ಹಂತಕ್ಕೆ ಕಳುಹಿಸಲಾಗುತ್ತದೆ. ಈ ವ್ಯಾಕ್ಸಿನ್ ನ ಪ್ರಯೋಗ ಯಶಸ್ವಿಯಾದಲ್ಲಿ ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಘಮನ ಸೆಳೆಯುವುದರಲ್ಲಿ ಯಾವುದೇ ಮಾತಿಲ್ಲ. ಅಂತಹ ಯಶಸ್ಸು ಭಾರತದ ಈ ತಂಡಕ್ಕೆ ಸಿಗಲಿ. COVAXIN ಮೂಲಕ ಭಾರತವು ಕೊರೊನಾ ತಡೆಗಟ್ಟುವಂತಾಗಲಿ ಎಂದು ಆಶಿಸುತ್ತೇವೆ.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here