ಹರಿಯಾಣ: ಫ್ರಾನ್ಸ್ ನಿಂದ ಐದು ರಫೇಲ್ ಯುದ್ಧ ವಿಮಾನಗಳು ಇಂದು ಹರಿಯಾಣಾದ ಅಂಬಾಲಾ ವಾಯುನೆಲೆಗೆ ಬಂದಿಳಿಯಲಿದ್ದು, ಕ್ಷಣಗಣನೆ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಅಂಬಾಲಾ ವಾಯುನೆಲೆ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.
ರಫೇಲ್ ಯುದ್ಧ ವಿಮಾನಗಳು ಬಂದಿಳಿಯುವ ವಾಯುನೆಲೆಯ ಸುತ್ತಮುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ನಿನ್ನೆ ಸಂಜೆಯಿಂದಲೇ ಅಂಬಾಲಾದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಇದರೊಂದಿಗೆ 3 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಡ್ರೋನ್ ಹಾರಾಟವನ್ನು ಮಾಡುವಂತಿಲ್ಲ ಎಂಬ ಆದೇಶ ಹೊರಡಿಸಲಾಗಿದೆ. ಅಂಬಾಲಾದ ಜನರು ಫ್ರಾನ್ಸ್ ನಿಂದ ಬಂದಿಲಿಯಲಿರುವ ರಫೇಲ್ ವಿಮಾನಗಳನ್ನು ಸ್ವಾಗತಿಸಲು ಕಾತುರದಿಂದ ಕಾದಿದ್ದಾರೆ.
Haryana: First batch of five Rafale aircraft will arrive in Ambala today to join the India Air Force (IAF) fleet. Visuals from Ambala city.
Sec 144 CrPC imposed in 4 villages closer to Ambala airbase. Gathering of people on roofs & photography during landing strictly prohibited. pic.twitter.com/llbDp6ZC4G
— ANI (@ANI) July 29, 2020
ಫ್ರಾನ್ಸ್ ನಿಂದ ಹೋರಾಟ ವಿಮಾನಗಳು ಸುಮಾರು ಏಳು ಸಾವಿರಕ್ಕಿಂತಲೂ ಹೆಚ್ಚಿನ ವಾಯುಮಾರ್ಗವನ್ನು ಕ್ರಮಿಸಿ, ಅಬುದಾಬಿಯ ಅಲ್ ಧಫ್ರಾ ಏರ್ ಬೇಸ್ ನಲ್ಲಿ ವಿಶ್ರಾಂತಿಯನ್ನು ಪದೆದುಕೊಂದಿದ್ದವು. ಅಲ್ಲಿಂದ ಹೋರಾಟ ವಿಮಾನಗಳು ನೇರವಾಗಿ ಇಂದು ಅಂಬಾಲಾ ವಿಮಾನ ನೆಲೆಗೆ ಬಂದಿಳಿಯಲಿವೆ. ಈ ನಡುವೆ 30 ಸಾವಿರ ಅಡಿ ಎತ್ತರದಲ್ಲಿ ಫ್ರೆಂಚ್ ವಾಯುನೆಲೆಯ ಟ್ಯಾಂಕರ್ ನಿಂದ ರಫೇಲ್ ವಿಮಾನಗಳಿಗೆ ಇಂಧನ ತುಂಬುವ ಸಾಹಸ ದೃಶ್ಯವನ್ನು ಭಾರತೀಯ ವಾಯು ಸೇನೆ ತನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ.
Indian Air Force appreciates the support provided by French Air Force for our Rafale journey back home. @Armee_de_lair @Indian_Embassy @Dassault_OnAir #Rafale#IndianAirForce pic.twitter.com/7Ec8oqOJmr
— Indian Air Force (@IAF_MCC) July 28, 2020