ahead-of-prime-minister-narendra-modis-meeting-with-political-leaders-of-jammu-kashmir-pakistan-issued-a-warning

ನವದೆಹಲಿ: ಜಮ್ಮು ಕಾಶ್ಮೀರದ ನಾಯಕರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಜೂನ್ 24 ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಚುನಾವಣಾ ಸೇರಿದಂತೆ ಹಲವು ಅಭಿವೃದ್ಧಿಯ ವಿಚಾರಗಳು ಚರ್ಚೆಗೆ ಬರಲಿವೆ ಎಂದು ಹೇಳಲಾಗುತ್ತಿದೆ. ಈ ನಡುವೆ ಪಾಕಿಸ್ತಾನಕ್ಕೆ ಒಳಗೆ ಸಣ್ಣ ನಡುಕ ಆರಂಭವಾಗಿದ್ದು, ಅದು ಈಗಾಗಲೇ ಕಿರಿಕ್ ಪ್ರಾರಂಭಿಸಿದೆ.

ಜೂನ್ 24 ರಂದು ನರೇಂದ್ರ ಮೋದಿಯವರು ಕಾಶ್ಮೀರದ ಪ್ರಮುಖ ಒಟ್ಟು 14 ಪಕ್ಷಗಳನ್ನು ಆಮಂತ್ರಿಸಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣಾ ನಡೆಸುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ದೆಹಲಿಯಲ್ಲಿ ಸರ್ವಪಕ್ಷ ಸಭೆ ಏರ್ಪಾಡು ಮಾಡಿದ್ದಾರೆ. ಈ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿದಂತೆ ಪ್ರಮುಖ ಸಚಿವರು ಬಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ದೇಶದಲ್ಲಿ ಈ ವಿಚಾರ ಸಂಚಲ ಸೃಷ್ಟಿಸಿದ್ದು, ಕೇಂದ್ರ ಸರಕಾರದ ಮುಂದುನ ನಡೆಯ ಕುರಿತು ವಿಶೇಷ ಚರ್ಚೆಗಳು ನಡೆಯುತ್ತಿವೆ.

ಇದನ್ನೂ ಓದಿರಿ: ಬಿಳಿ ಕೂದಲಿನ ಸಮಸ್ಯೆ-ಅಂಗೈಯಲ್ಲಿಯೇ ಇದೆ ಮನೆಮದ್ದುಗಳು

ಈ ಮಹತ್ವದ ಸರ್ವಪಕ್ಷ ಸಭೆಗೆ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ, ಜೆಕೆಎಪಿ ಪಕ್ಷದ ಅಲ್ತಾಫ್ ಬುಕಾರಿ ಮತ್ತು ಪೀಪಲ್ಸ್ ಕಾನ್ಫರೆನ್ಸ್ ಸಜ್ಜದ್ ಲೋನ್ ಸೇರಿದಂತೆ ಪ್ರಮುಖರಿಗೆ ಆಮಂತ್ರಣ ನೀಡುವ ಪ್ರಕ್ರಿಯೆ ನಡೆಯುತ್ತಿದ್ದು, ಸಭೆಯಲ್ಲಿ ಏನೆಲ್ಲಾ ನಿರ್ಣಯಗಳು ಬರಲಿವೆ ಮತ್ತು ಕಾಶ್ಮೀರದ ಪಕ್ಷಗಳು ಕೇಂದ್ರದೊಂದಿಗೆ ಯಾವರೀತಿ ಸ್ಪಂದಿಸಲಿವೆ ಎನ್ನುವುದು ಕುತೂಹಲ ಮೂಡುವಂತೆ ಮಾಡಿದೆ.

ಭಾರತ ಸರಕಾರ ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ತೆರವುಗಿಳಿಸಿದ ನಂತರ ಪಾಕಿಸ್ತಾನ ಕೈ ಕೈ ಹಿಸುಕಿಕೊಳ್ಳುತ್ತಿರುವುದಂತೂ ಸುಳ್ಳಲ್ಲ. ಈ ನಡುವೆ ಕಾಶ್ಮೀರದಲ್ಲಿ ಹಲವು ರೀತಿಯಲ್ಲಿ ಅತಂತ್ರ ಏರ್ಪಡಿಸಲು ಪ್ರಯತ್ನವನ್ನೂ ಮಾಡಿ ಕೈಚೆಲ್ಲಿ ಕುಳಿತಿದೆ. ಜಮ್ಮು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ಹಿಂತೆಗೆದುಕೊಂಡಿರುವ ಭಾರತದ ನಿರ್ಧಾರದ ವಿರುದ್ಧ ಇಮ್ರಾನ್ ಖಾನ್ ಅಂತಾರಾಷ್ಟ್ರೀಯ ಗಮನ ಸೆಳೆಯಲು ಹೇಳಿಕೆ ನೀಡುತ್ತಲಿದ್ದರೂ ಯಾರೂ ಬೆಂಬಲ ನೀಡದ ಕಾರಣ ಅವಮಾನ ಅನುಭವಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ವಿಶೇಷ ಸ್ಥಾನಮಾನ ರದ್ದತಿಯ ಬಳಿಕ ಜಮ್ಮು ಕಾಶ್ಮೀರದ ರಾಜಕೀಯ ಪಕ್ಷಗಳ ಜತೆ ಕೇಂದ್ರ ಸರ್ಕಾರ ಮೊದಲ ಸಭೆ ನಡೆಸುವ ವಿಚಾರ ತಿಳಿದು ಪಾಕ್ ಸರಕಾರ ಸ್ವಲ್ಪ ಕಳವಳಗೊಂಡಂತೆ ಕಾಣುತ್ತಿದೆ.

ಇದನ್ನೂ ಓದಿರಿ: ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ವಿರುದ್ಧ ಕ್ರಮ: ಅರುಣ್ ಸಿಂಗ್

ahead-of-prime-minister-narendra-modis-meeting-with-political-leaders-of-jammu-kashmir-pakistan-issued-a-warning

ಈ ಸಂಬಂಧ ಹೇಳಿಕೆ ನೀಡಿರುವ ಪಾಕ್ ವಿದೇಶಾಂಗ ಸಚಿವ ಮೊಹಮ್ಮದ್ ಖುರೇಷಿ, ಕಾಶ್ಮೀರವನ್ನು ವಿಭಜಿಸಲು ಮತ್ತು ಜನಸಂಖ್ಯಾಶಾಸ್ತ್ರವನ್ನು ಬದಲಾಯಿಸಲು ಭಾರತ ನಡೆಸುವ ಯಾವುದೇ ಕ್ರಮವನ್ನು ವಿರೋಧಿಸುವುದಾಗಿ ಹೇಳಿಕೊಂಡಿದ್ದಾನೆ. ಸದ್ಯ ಜಗತ್ತಿನಲ್ಲಿ ಪಾಕಿಸ್ತಾನದ ಮಾತಿಗೆ ಮೂರು ಕಾಸಿನ ಕಿಮ್ಮತ್ತೂ ಇಲ್ಲದಿರುವುದು ಎಲ್ಲರಿಗು ತಿಳಿದಿದೆ. ಆದರೂ ತಮ್ಮ ಹೇಳಿಕೆಯನ್ನು ನೀಡಿ ಭಾರತಕ್ಕೆ ಎಚ್ಚರಿಕೆಯನ್ನು ನೀಡುವಂತೆ ಮಾತನಾಡುವುದು ಹಾಸ್ಯಾಸ್ಪದ ವಿಚಾರವಾಗಿದೆ.

ಕಳೆದ 2019 ರ ಆಗಸ್ಟ್ ನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಜಮ್ಮು ಕಾಶ್ಮೀರ ಮತ್ತು ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು. ಸದ್ಯ ಕೇಂದ್ರಾಡಳಿತ ಪ್ರದೇಶಗಳಿಗೆ ರಾಜ್ಯದ ಸ್ಥಾನಮಾನಗಳನ್ನು ಕೇಂದ್ರ ನೀಡಲಿದೆ ಎಂಬ ವಿಚಾರ ಸುಳಿದಾಡುತ್ತಿದ್ದು, ಸರ್ವಪಕ್ಷ ಸಭೆಯಲ್ಲಿ ಏನೆಲ್ಲಾ ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎನ್ನುವುದು ಸಭೆಯ ಬಳಿಕವಷ್ಟೇ ಗೊತ್ತಾಗಬೇಕಿದೆ.

LEAVE A REPLY

Please enter your comment!
Please enter your name here