Image Copyright: google.com

ಇಂದು ಭಾರತವು ಮಿಶನ್ ಶಕ್ತಿ ಯಶಸ್ವಿ ಪರೀಕ್ಷೆಯ ಮೂಲಕ ರಕ್ಷಣೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆಯಾಮವನ್ನು ಬರೆಯಿತು. ಈ ಪರೀಕ್ಷೆಯ ಯಶಸ್ಸಿನ ನಂತರ ಭಾರತದ ಶಕ್ತಿಯನ್ನು ಕಂಡು ಹೆದರಿ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಉನ್ನತ ಮಟ್ಟದ ಭಾದ್ರತಾ ಸಭೆಯನ್ನು ಕರೆದು ಚರ್ಚೆಯನ್ನು ನಡೆಸಿದ್ದಾರೆ ಎನ್ನಲಾಗಿದೆ.

ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಪಾಕಿಸ್ತಾನಕ್ಕೆ ಭಾರತದ ಈ ಸಾಧನೆ ಹೊಸ ತಲೆನೋವನ್ನು ತಂದೊಡ್ಡಿದೆ. ಈ ಕಾರಣಕ್ಕಾಗಿ ತಕ್ಷಣ ಉನ್ನತ ಮಟ್ಟದ ಭದ್ರತಾ ಸಭೆಯಲ್ಲಿ ಚರ್ಚಿಸಿ, ಅಂತರಿಕ್ಷ ಕ್ಷೇತ್ರದಲ್ಲಿ ಭಾರತದ ತಂತ್ರಜ್ಞಾನಕ್ಕೆ ತಡೆ  ನೀಡುವಂತೆ ಪಾಕಿಸ್ತಾನಿ ವಿದೇಶಾಂಗ ಸಚಿವಾಲಯ ವಿಶ್ವದ ರಾಷ್ಟ್ರಗಳಿಗೆ ಒತ್ತಾಯಿಸಲು ತಿರ್ಮಾನಿಸಿತು.

 

ಪಾಕಿಸ್ತಾನದ ಉನ್ನತ ಮಟ್ಟದ ಭದ್ರತಾ ಸಭೆಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಬೇಜ್ವಾ ಸೇರಿದಂತೆ ಸೇನೆಯ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ನಂತರ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ” ಅಂತರಿಕ್ಷವು ಮಾನವ ಕುಲದ ಪ್ರತಿಯೊಬ್ಬರ ಸ್ವತ್ತು. ಅದು ಮಿಲಿಟರೀಕರಣವಾಗಬಾರದು, ಈ ಹಿಂದೆ ಅಂತರಿಕ್ಷದಲ್ಲಿ ಮಿಲಿಟರೀಕರಣ ಚಟುವಟಿಕೆಗಳ ವಿರುದ್ಧ ಧ್ವನಿ ಎತ್ತಿದ ವಿಶ್ವದ ರಾಷ್ಟ್ರಗಳು  ಈ ಸಮಯದಲ್ಲಿ ಧ್ವನಿ ಎತ್ತಲಿವೆ” ಎಂದು ಹೇಳಿದೆ. ಈ ಹೇಳಿಕೆಯಲ್ಲಿ ಎಲ್ಲಿಯೂ ಭಾರತದ ಹೆಸರನ್ನು ಎತ್ತದೆ ತನ್ನ ಜಾಣ ನಡೆಯನ್ನು ತೋರಿದೆ ಎಂದು ಹೇಳಬಹುದು.

ಭಾರತ ಇಂದು “ಮಿಶನ್ ಶಕ್ತಿ” ಎಂಬ ತಂತ್ರಜ್ಞಾನದ ಮೂಲಕ ಬೇಹುಗಾರಿಕಾ ಸೆಟಲೈಟನ್ನು ಕೇವಲ ಮೂರೂ ನಿಮಿಷಗಳಲ್ಲಿ ಹೊಡೆದುರುಳಿಸುವ ಮೂಲಕ  ತನ್ನ ಯಶಸ್ವಿ ಪ್ರಯೋಗವನ್ನು ನಡೆಸಿದೆ. ಅಲ್ಲದೆ ಈ ಆಂತರಿಕ ರಕ್ಷಣಾ ಮಿಸೈಲ್ ತಂತ್ರಜ್ಞಾನ (ವಿ-ಸ್ಯಾಟ್) ವನ್ನು ಅಭಿವೃದ್ಧಿಪಡಿಸಿದ ನಾಲ್ಕನೆಯ ರಾಷ್ಟ್ರವಾಗಿ ಹೊರಹೊಮ್ಮಿದೆ. ಭಾರತದ ಈ ಯಶಸ್ಸು ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿರುವುದಂತು  ಸುಳ್ಳಲ್ಲ..

 ಇದನ್ನೂ ಓದಿರಿ:ಮೋದಿ ಸರಕಾರಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು
SPONSORED CONTENT

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here