ಕನ್ನಡದ ಚಿತ್ರರಂಗದ ಬಹುಬೇಡಿಕೆಯ ನಟಿ ಅದಿತಿ ಪ್ರಭುದೇವ ಅವರ ಮದುವೆ ದಿನಾಂಕ ಫಿಕ್ಸ್ ಆಗಿದ್ದು, ಆಮಂತ್ರಣ ಪತ್ರಿಕೆ ಫೋಟೋ ವೈರಲ್ ಆಗಿದೆ. ಯಶಸ್ವಿ ಎನ್ನುವವರ ಜೊತೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಇದೇ ತಿಂಗಳ (ನವೆಂಬರ್) 27 ರಂದು ಮದುವೆಯಾಗಲಿದ್ದಾರೆ.
ಕಿರುತೆರೆಯ ಮೂಲಕ ನಟನಾ ವೃತ್ತಿಗೆ ಕಾಲಿಟ್ಟ ಇವರು, 2017 ರಲ್ಲಿ ಮೊದಲ ಬಾರಿಗೆ ‘ಧೈರ್ಯಂ’ ಚಿತ್ರದ ಮೂಲಕ ಅಜಯ್ ರಾವ್ ಅವರ ಜೊತೆಯಲ್ಲಿ ನಾಯಕಿಯಾಗಿ ನಟಿಸಿ ಹಿರಿತೆರೆಗೆ ಎಂಟ್ರಿ ಕೊಟ್ಟರು. ಅದಾದ ಬಳಿಕ ಒಂದರ ಹಿಂದೆ ಒಂದರಂತೆ ಬಜಾರ್, ಸಿಂಗ, ರಂಗನಾಯಕಿ, ಓಲ್ಡ್ ಮಾಂಕ್ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಇವರ ನಟನೆಯ ಸಿಂಗ ಚಿತ್ರದ ಹಾಡು “ಶ್ಯಾನೆ ಟಾಪ್ ಆಗವ್ಳೆ ನಮ್ ಹುಡುಗಿ..” ತುಂಬಾ ಜನರ ಮೆಚ್ಚುಗೆಯನ್ನೂ ಗಳಿಸಿ ಎಲ್ಲರ ಬಾಯಿಯಲ್ಲಿ ಹರಿದಾಡಿತ್ತು.
ಕಳೆದ ಡಿಸೇಂಬರ್ ನಲ್ಲಿ ಉದ್ಯಮಿ ಮತ್ತು ಕಾಫಿ ಪ್ಲಾಂಟರ್ ಆಗಿರುವ ಯಶಸ್ವಿ ಅವರ ಜೊತೆಯಲ್ಲಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಸದ್ಯ ಅವರ ವಿವಾಹ ಆಮಂತ್ರಣ ಪತ್ರಿಕೆಯ ಫೋಟೋ ವೈರಲ್ ಆಗಿದ್ದು, ಇದೇ ತಿಂಗಳ 27 ರಂದು ಹಸೆಮಣೆ ಏರಲಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪೋಸ್ಟ್ !