ಎರಡೇ ದಿನಕ್ಕೆ ವೈಷ್ಣವಿ ವಿವಾಹಕ್ಕೆ ವಿಘ್ನ; ಇದನ್ನು ಇಲ್ಲಿಗೆ ಬಿಟ್ಟು ಬಿಡಿ; ನಟಿ !

ವೈಷ್ಣವಿ ವಿವಾಹ | actress-vaishnavi-gowda-reaction-on-her-engagement

ಬೆಂಗಳೂರು: ‘ಅಗ್ನಿಸಾಕ್ಷಿ’ ಧಾರವಾಹಿ ಮೂಲಕ ಮನೆಮಾತಾದ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥ ವಿಚಾರ ದಿನಕ್ಕೊಂದು ತಿರುವು ಪಡೆದುಕೊಂಡು ಮುರಿದು ಬಿದ್ದಿದೆ.

‘ಅಗ್ನಿಸಾಕ್ಷಿ’ ಧಾರವಾಹಿ ಮೂಲಕ ಎಲ್ಲರ ಮನಗೆದ್ದಿದ್ದ ನಟಿ, ಬಿಗ್ ಬಾಸ್ ಮನೆಯಲ್ಲಿಯೂ ಉತ್ತಮ ಪ್ರದರ್ಶನ ತೋರಿದ್ದರು. ಕಳೆದ ಒಂದೆರಡು ದಿನಗಳ ಹಿಂದೆ ವೈಷ್ಣವಿ ಗೌಡ ಮತ್ತು ವಿಧ್ಯಾಭರಣ್ ಅವರು ಮಾಲೆಯನ್ನು ಹಾಕಿಕೊಂಡಿದ್ದು, ಹಣ್ಣು ಕಾಯಿ ಮುಂದೆ ಇಟ್ಟುಕೊಂಡು ಸಿಹಿತಿನಿಸು ತಿಂದಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಫೋಟೋವನ್ನು ನೋಡಿದ ಜನರು ವೈಷ್ಣವಿ ಅವರು ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ ಎಂದು ಶುಭಾಶಯ ಕೋರಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿ, ಎಂಗೇಜ್ ಮೆಂಟ್ ನಡೆದಿಲ್ಲ, ಇದು ಕೇವಲ ಹೆಣ್ಣು ನೋಡುವ ಶಾಸ್ತ್ರ. ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ನಮಗೂ ಸಮಯಾವಕಾಶ ಬೇಕು ಎಂದು ಹೇಳಿದ್ದರು. ಇದಾದ ಒಂದೇ ದಿನದಲ್ಲಿ ಅನಾಮದೇಯ ಕರೆಯೊಂದು ಬಂದಿದ್ದು, ವಿಧ್ಯಾಭರಣ್ ಅವರು ತನಗೆ ಮತ್ತು ಬೇರೆಯೊಬ್ಬರಿಗೆ ಮೋಸಮಾಡಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿರಿ: ‘ಸತ್ಯ’ ಧಾರಾವಾಹಿ ಖ್ಯಾತಿಯ ಸಾಗರ್ ಬಿಳಿಗೌಡ ಮದುವೆಯಂತೆ ಹುಡುಗಿ ಯಾರು ಗೊತ್ತೇ?

ಈ ಬಗ್ಗೆ ಖಾಸಗಿ ಚಾನೆಲ್ ವೊಂದರ ಜೊತೆ ಮಾತನಾಡಿರುವ ನಟಿ ವೈಷ್ಣವಿಗೌಡ, ‘ವಿದ್ಯಾಭರಣ್ ಜೊತೆ ನಿಶ್ಚಿತಾರ್ಥ ನಡೆದಿಲ್ಲ ಅಂತ ನಾನು ಮುಂಚಿನಿಂದಲೂ ಹೇಳ್ತಾ ಬಂದಿದೀನಿ. ಇದನ್ನು ಇಲ್ಲಿಗೇ ಬಿಟ್ಟುಬಿಡಿ. ನಾನು ಈ ಕುರಿತು ಮತ್ತೆ ಮಾತನಾಡಿದ್ರೆ ಬೆಳೆಯುತ್ತಲೇ ಹೋಗುತ್ತದೆ. ಹುಡುಗನ ಕಡೆಯಿಂದ ಇನ್ನೇನೋ ಮಾತು ಬರಬಹುದು. ಅವರು ಹೆಣ್ಣು ನೋಡೋ ಶಾಸ್ತ್ರಕ್ಕೆಂದು ಬಂದು ತಾಂಬೂಲ ಬದಲಾಯಿಸಿಕೊಂಡ್ರು ಅಷ್ಟೇ. ಅದು ನಿಶ್ಚಿತಾರ್ಥ ಅಲ್ಲ’ ಎಂದು ಹೇಳಿದ್ದಾರೆ.

ಇದೆಲ್ಲಾ ಒಂದು ವಾರದ ಹಿಂದೆ ಆಗಿದ್ದು. ಬೆಳೆಸಿದಷ್ಟೂ ಎಳೆದುಕೊಳ್ಳುತ್ತೆ. ಬಿಟ್ಟು ಬಿಡೋಣ. ಮಾತಿಗೆ ಮಾತು ಬೇಡ. ನಾನು ಹಾಗೂ ನನ್ನ ಕುಟುಂಬ ಇದನ್ನು ಇಲ್ಲಿಗೇ ಬಿಡುತ್ತಿದ್ದೇವೆ. ಮೊದಲಿಗೇ ಗೊತ್ತಾಗಿದ್ದು ಒಳ್ಳೆಯದಾಯ್ತು. ಒಂದು ವೇಳೆ ಮದುವೆ ಆದ್ಮೇಲೆ ಗೊತ್ತಾದ್ರೆ ಕಷ್ಟ ಆಗ್ತಿತ್ತು ಅಲ್ವೇ?’ ಎಂದಿದ್ದಾರೆ.

ಇದನ್ನೂ ಓದಿರಿ: ಡಿಸೆಂಬರ್ 18 ರಂದು ವಿಷ್ಣುವರ್ಧನ್ ಸ್ಮಾರಕ ಉದ್ಘಾಟಿಸಲಿರುವ ಸಿಎಂ ಬೊಮ್ಮಾಯಿ

LEAVE A REPLY

Please enter your comment!
Please enter your name here