ನಟಿ ತಾಪ್ಸಿಗೆ ದೇಹದ ಈ ಭಾಗ ತುಂಬಾ ಇಷ್ಟವಂತೆ..!

ಬಹುಭಾಷಾ ನಟಿ ತಾಪ್ಸಿ ಅವರು ದೇಹದ ಒಂದು ಭಾಗ ತುಂಬಾ ಇಷ್ಟ ಎಂದು ಟ್ವೀಟ್ ಮೂಲಕ ಸುದ್ದಿಯಲ್ಲಿದ್ದಾರೆ. ಅವರನ್ನು ವ್ಯಕ್ತಿಯೋಬ್ಬ “ನಿಮ್ಮ ಬಾಡಿ ಪಾರ್ಟ್ಸ್ ನನಗಿಷ್ಟ” ಎಂದು ಹೇಳಿದಕ್ಕೆ ಪ್ರತಿಯಾಗಿ ತುಂಬಾ ಖಾರವಾಗಿ ಪ್ರತಿಕ್ರಿಯೆ ನೀಡುತ್ತ ಹೀಗೆ ಹೇಳಿದ್ದಾರೆ.

ತನ್ನನ್ನು ಟ್ರೋಲ್ ಮಾಡಿದ ವ್ಯಕ್ತಿಗೆ ಪ್ರತಿಕ್ರಿಯೆ ನೀಡುತ್ತ, ನನಗೆ ಸೇರೆಬ್ರಮ್ (Cerebrum) ಇಷ್ಟ ನಿಮಗೆ ? ಎಂದು ಖಾರವಾಗಿಯೇ ರಿಟ್ವೀಟ್ ಮಾಡಿದ್ದಾರೆ. ನಟಿ ತಾಪ್ಸಿಯವರ ಇಷ್ಟವನ್ನು ತಿಳಿದ ಅಭಿಮಾನಿಗಳು  ಸೇರೆಬ್ರಮ್ ಪದದ ಅರ್ಥ ತಿಳಿಯದೇ ಗೂಗಲ್ ಮಾಡಿದ್ದಾರೆ. ಸೋಮವಾರ ಅತ್ಯಧಿಕ ಪ್ರಮಾಣದಲ್ಲಿ ಸರ್ಚ್ ಮಾಡಲ್ಪಟ್ಟ ಶಬ್ದಗಳಲ್ಲಿ ಇದೂ ಒಂದಾಗಿದ್ದು, ತುಂಬಾ ವೈರಲ್ ಆಗಿದೆ.

ಇದನ್ನೂ ಓದಿರಿ : ಬಿಡುಗಡೆಯಾಯ್ತು ಕೆಜಿಎಫ್ ನ ಮೊದಲ ಹಾಡು..!

 

ಇನ್ನು ಸೇರೆಬ್ರಮ್ ಎಂದರೆ ಮೆದುಳಿನ ಪ್ರಮುಖ ಭಾಗವಾಗಿದ್ದು, ಇದನ್ನು ಮುಮ್ಮೆದುಳು ಎಂದೂ ಕರೆಯಲಾಗುತ್ತದೆ. ಇದು ನರಗಳ ಕಾರ್ಯಚಟುವಟಿಕೆ ಮತ್ತು ದೇಹದ ಸ್ವಯಂ ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳುವ ಬಹು ಮುಖ್ಯ ಮೆದುಳಿನ ಭಾಗವಾಗಿದೆ.

 

 

Image Copyrights: google.com

LEAVE A REPLY

Please enter your comment!
Please enter your name here