ಮುಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (34) ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸುದ್ದಿ ಬಾಲಿವುಡ್ ರಂಗದಲ್ಲಿ ಆಘಾತವನ್ನು ಉಂಟುಮಾಡಿದೆ. ಇವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎನ್ನುವುದು ಇನ್ನಷ್ಟೇ ತಿಳಿದುಬರಬೇಕಿದೆ. ಸಧ್ಯ ಮುಬೈ ಪೊಲೀಸರು ಇವರ ಮನೆಗೆ ತೆರಳಿ ತನಿಕೆಯನ್ನು ಕೈಗೊಂಡಿದ್ದಾರೆ.
ಇವರು “ಕಿಸ್ ದೇಶ್ ಮೇ ಹೈ ಮೇರಾ ದಿಲ್” ಕಾರ್ಯಕ್ರಮದ ಮೂಲಕ ತಮ್ಮ ವ್ರತ್ತಿ ಜೀವನವನ್ನು ಪ್ರಾರಂಭಿಸಿದರು. ಆದರೆ ಏಕ್ತಾ ಕಪೂರ್ ಅವರ “ಪವಿತ್ರ ರಿಸ್ತಾ” ಕಾರ್ಯಕ್ರಮದ ಮೂಲಕ ಜನಪ್ರೀಯತೆಯನ್ನು ಗಳಿಸಿದರು. ಆ ನಂತರ “ಕ್ಯಾ ಪೋ ಛೆ” ಚಿತ್ರದ ಮೂಲಕ ಸಿನಿಮಾ ರಂಗವನ್ನು ಪ್ರವೇಶಿಸಿದ್ದರು. ಇತ್ತೀಚೆಗಷ್ಟೇ ಟೀಮ್ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ಧೋನಿ ಪಾತ್ರದಲ್ಲಿ ಮಿಂಚಿದ್ದನ್ನು ನೆನೆಯಬಹುದು.
ಮುಬೈನ ಬಾಂದ್ರಾ ನಿವಾಸದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ ಆಪ್ತ ಸಹಾಯಕ ಪೊಲೀಸರಿಗೆ ಫೋನ್ ಕರೆ ಮಾಡುವಮುಲಕ ತಿಳಿಸಿದ್ದಾರೆ ಎನ್ನಲಾಗಿದೆ. ವಿಚಾರಣೆಯ ಬಳಿಕವಷ್ಟೇ ಸಾವಿಗೆ ನಿಖರ ಕಾರಣವೇನೆಂದು ತಿಲಿದುಬರಬೇಕಷ್ಟೇ.