ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ಮಹಿಳಾ ಹೋರಾಟಗಾರ್ತಿ ರೆಹನಾ ಪಾತಿಮಾಳನ್ನು ಇಂದು ಬೆಳಿಗ್ಗೆ ಪೊಲೀಸರು ಬಂದಿಸಿದ್ದಾರೆ.

ಫೇಸ್ ಬುಕ್ ನಲ್ಲಿ ಸೆಪ್ಟೆಂಬರ್ 30 ರಂದು ಅಯ್ಯಪ್ಪ ಮಾಲಾಧಾರಿಗಳಂತೆ ಫೋಟೋ ತೆಗೆದು ಪೋಸ್ಟ್ ಹಾಕಿಕೊಂಡಿದ್ದಳು. ಇದಕ್ಕೆ ಜನತೆಯಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದಲ್ಲದೇ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತ ಅವಹೇಳನಕಾರಿ ಫೋಸ್ಟ್ ಹಾಕಿಕೊಂಡಿರುವ ಕುರಿತು ಅಕ್ಟೋಬರ್ 22 ರಂದು ಪತನಂತಿಟ್ಟ ಪೋಲಿಸ್ ಸ್ಟೇಶನ್ ನಲ್ಲಿ ದೂರು ದಾಕಲಾಗಿತ್ತು.

ಈ ಸಂಬಂದ ತನ್ನನ್ನು ಪೊಲೀಸರು ಬಂಧಿಸಬಹುದೆಂಬ ಆತಂಕದ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಜಾಮೀನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗುವ ಭೀತಿಎದುರಾಗಿತ್ತು.

ಇದನ್ನೂ ಓದಿರಿ: ಹಿರಿಯ ನಟ, ಮಾಜಿ ಸಚಿವ ಪಂಚಭೂತಗಳಲ್ಲಿ ಲೀನ

ಸುಪ್ರಿಂ ಕೋರ್ಟ್ ನ ಆದೇಶದಂತೆ ಭಕ್ತರ ವಿರೋದದ ನಡುವೆಯೂ ಶಬರಿಮಲೆ ಅಯ್ಯಪ್ಪನ ದೇವಾಲಯ ಪ್ರವೇಶಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಆದರೆ ಅವಹೇಳನಕಾರಿ ಪೋಸ್ಟ್ ಮಾಡಿದ ಕಾರಣ ಸೆಕ್ಷನ್ 295 ಎ ರ ಅಡಿಯಲ್ಲಿ ಪೋಲಿಸರಿಂದ ಬಂಧನಕ್ಕೊಳಗಾಗಬೇಕಾಯಿತು.

 

Image copyright : google.com

LEAVE A REPLY

Please enter your comment!
Please enter your name here