ಶ್ರದ್ಧಾ ಕೊಲೆ । accused-kills-ex-girl-friend-and-cuts-her-body-into-6-pieces-up-police-arrests

ದೇಶವನ್ನೇ ಬೆಚ್ಚಿ ಬೀಳಿಸಿದ ಶ್ರದ್ಧಾ ಕೊಲೆ ಪ್ರಕರಣ ಇನ್ನೂ ತನಿಖೆ ನಡೆಯುತ್ತಿದ್ದು, ಇಂತಹದ್ದೇ ಮಾದರಿಯ ಕೊಲೆಯ ಅಪರಾಧಗಳು ಬೆಳಕಿಗೆ ಬರುತ್ತಿವೆ. ಈಗ ಉತ್ತರ ಪ್ರದೇಶದಲ್ಲೂ ಮಹಿಳೆಯೊಬ್ಬಳನ್ನು ಕೊಲೆ ಮಾಡಿ 6 ತುಂಡು ಮಾಡಿ ಬಾವಿಗೆ ಬಿಸಾಡಿರುವ ಘಟನೆ ನಡೆದಿದೆ. ಈ ಸಂಬಂಧ ಯುಪಿಯ ಅಜಂಗಢದಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.

ಇದನ್ನೂ ಓದಿರಿ: ರೈತರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸದ ಮೋದಿ ಸರಕಾರ – ಮಲ್ಲಿಕಾರ್ಜುನ್ ಖರ್ಗೆ

ಆರೋಪಿಯನ್ನು ಮಹಿಳೆಯ ತಲೆ ಹುಡುಕಲು ಸ್ಥಳವೊಂದಕ್ಕೆ ಕರೆದುಕೊಂಡು ಹೋದಾಗ ಗುಂಡಿನ ದಾಳಿ ನಡೆದಿದ್ದು, ಈ ವೇಳೆ ಎನ್‌ಕೌಂಟರ್‌ನಲ್ಲಿ ಯುಪಿ ಪೊಲೀಸರು ಆರೋಪಿಗೆ ಸಹ ಗುಂಡು ಹೊಡೆದಿದ್ದಾರೆ. ಆರೋಪಿಯನ್ನು ಪ್ರಿನ್ಸ್ ಯಾದವ್‌ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶನಿವಾರ ಯಾದವ್‌ನನ್ನು ಬಂಧಿಸಲಾಗಿದ್ದು, ಆತ ಘಟನಾ ಸ್ಥಳದಲ್ಲಿ ನಾಡ ಬಂದೂಕನ್ನು ಬಚ್ಚಿಟ್ಟಿದ್ದ. ಹಾಗೂ, ಸ್ಥಳಕ್ಕೆ ಹೋದ ನಂತರ ಪೊಲೀಸ್‌ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಆತ ಪೊಲೀಸರತ್ತ ಗುಂಡಿನ ದಾಳಿ ನಡೆಸಿದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೆಲ ಸ್ಥಳೀಯರು ಪಶ್ಚಿಮಿ ಗ್ರಾಮದ ಬಾವಿಯಲ್ಲಿ ಮೃತದೇಹವೊಂದನ್ನು ಪತ್ತೆಹಚ್ಚಿದ ನಂತರ ನವೆಂಬರ್‌ 15ರಂದು ಈ ಘಟನೆ ಬೆಳಕಿಗೆ ಬಂದಿದೆ. ಆ ಮಹಿಳೆಯನ್ನು ಆರಾಧನಾ ಎಂದು ಗುರುತಿಸಲಾಗಿದ್ದು, ಆಕೆಯ ಮೃತದೇಹ ಅರೆ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಲ್ಲದೆ, ಘಟನೆ ನಡೆದು 2- 3 ದಿನಗಳಾಗಿರಬಹುದು ಎಂದೂ ಅಜಂಗಢದ ಎಸ್‌ಪಿ ಅನುರಾಗ್‌ ಆರ್ಯ ಮಾಹಿತಿ ನೀಡಿದ್ದರು.

ಇದನ್ನೂ ಓದಿರಿ: ‘ಚಿಲುಮೆ ಸಂಸ್ಥೆ’ ಮುಖ್ಯಸ್ಥ ರವಿಕುಮಾರ್ ಪೋಲಿಸ್ ವಶಕ್ಕೆ

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here