ತಮ್ಮದೇ ವ್ಯಂಗ್ಯಚಿತ್ರ ಶೇರ್ ಮಾಡಿದ ಅಭಿಷೇಕ್ ಬಚ್ಚನ್ ..!

Abhishek Bachchan

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಸದ್ಯ ಅವರು ಗುಣಮುಖರಾಗಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮ್ಮದೇ ವ್ಯಂಗ್ಯ ಚಿತ್ರವನ್ನು ಶೇರ್ ಮಾಡಿ ತಮ್ಮ ಆರೋಗ್ಯವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಅಭಿಷೇಕ್ ಬಚ್ಚನ್ ಅವರು ಪ್ರಿಮೀಯರ್ ಕಬಡ್ಡಿ ಲೀಗ್ ತಂಡವೊಂದರ ಮಾಲಿಕತ್ವವನ್ನು ಹೊಂದಿದ್ದು, ಥೇಟ್ ಕಬಡ್ಡಿ ಶೈಲಿಯಲ್ಲಿ ಪಂಗಾ ತೆಗೆದುಕೊಳ್ಳುತ್ತಿರುವಂತೆ ವ್ಯಂಗ್ಯ ಚಿತ್ರವನ್ನು ಚಿತ್ರಿಸಲಾಗಿದೆ. ಅವರ ಮಾಲಿಕತ್ವದ ಪಿಂಕ್ ಪ್ಯಾಂಥರ್ಸ್ ತಂಡದ ಸ್ಲೋಗನ್ ‘ಔರ್ ಲೇ ಪಂಗಾ’ ಎನ್ನುವ ವಾಕ್ಯವನ್ನು ಕೊರೊನಾ ವೈರಸ್ ವಿರುದ್ಧ ಬಳಸಲಾಗಿದೆ. ಅಭಿಷೇಕ್ ಬಚ್ಚನ್ ಅವರು ಕೊರೊನಾ ಸೋಂಕನ್ನು ಗೆದ್ದು ಬಂದ ಖುಷಿಯಲ್ಲಿ ಕಲಾವಿದ ಮನೋಜ್ ಸಿನ್ಹಾ ಅವರು ಬಿಡಿಸಿರುವ ಚಿತ್ರವನ್ನು ಅಭಿಷೇಕ್ ಅವರು ತಮ್ಮ ವಾಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here