aarogya-setu-app-now-mandatory-for-office-workers

ವೈರಸ್ ಹರಡುವ ಸಾಧ್ಯತೆಗಳು ಇನ್ನೂ ಇರುವ ಕಾರಣಗಳಿಂದ ಸುಲಭವಾಗಿ ರೋಗಿಗಳ ಟ್ರಾಕ್ ಮಾಡಲು ಸಾಧ್ಯವಾಗುವ ‘ಆರೋಗ್ಯ ಸೇತು’ ಆಪ್ ಕಡ್ಡಾಯವಾಗಿ ಬಳಸಬೇಕೆಂದು ಕೇಂದ್ರ ಸರಕಾರ ಹೇಳಿದೆ. ಅಲ್ಲದೇ ಉದ್ಯೋಗಕ್ಕೆ ತೆರಳುವ ಪ್ರತಿಯೊಬ್ಬರೂ ಬಳಸುವುದು ಕಡ್ಡಾಯವೆಂದು ಆದೇಶ ಹೊರಡಿಸಿದೆ.

Play Rummy Win Cash
Advertisement

ನಿನ್ನೆ ಕೇಂದ್ರ ಸರಕಾರ ಹೊರಡಿಸಿರುವ ಮಾರ್ಗಸೂಚಿಯ ಪ್ರಕಾರ ಸರಕಾರಿ ಮತ್ತು ಕಾಸಗಿ ಉದ್ಯೋಗಿಗಳು ಆರೋಗ್ಯ ಸೇತು ಆಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಕೊರೊನಾ ಸೋಂಕು ಹೆಚ್ಚಿರುವ ರೆಡ್ ಝೋನ್ ಗಳಲ್ಲಿ ವಾಸಮಾಡುವವರು ಸಹ ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ತಿಳಿಸಿದೆ. 

ಇದನ್ನು ಓದಿರಿ: ಕೊರೊನಾ ಪೀಡಿತ ವ್ಯಕ್ತಿಗಳು ಹತ್ತಿರದಲ್ಲಿದ್ದರೆ ಕೂಡಲೆ ನಿಮಗೆ ಎಚ್ಚರಿಕೆ ನೀಡುವ ಆಪ್ ಬಿಡುಗಡೆ..!

ಈ ಮೂಲಕ ಒಂದೊಮ್ಮೆ ಸೋಂಕು ತಗುಲಿದರೂ ಸುಲಭವಾಗಿ ಮತ್ತು ವೈಜ್ಞಾನಿಕವಾಗಿ ಅವರ ಸಂಚಾರ ಪತ್ತೆಹಚ್ಚಲು ಸುಲಭವಾಗಲಿದೆ ಎಂಬ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ. ಈ ನಡುವೆ ಈ ಆಪ್ ಮೂಲಕ ಸಾರ್ವಜನಿಕರ ಮಾಹಿತಿಗಳನ್ನು ಕದಿಯಲಾಗುತ್ತಿದೆ ಎಂದು ಊಹಾಪೋಹಗಳು ಹರಿದಾಡುತ್ತಿದ್ದು, ಈ ರೀತಿಯ ನಿಮ್ಮ ಯಾವುದೇ ಮಾಹಿತಿಗಳು ಲೀಕ್ ಆಗುವುದಿಲ್ಲ ಮತ್ತು ಇದರ ಬಳಕೆಯಿಂದ ಯಾವುದೇ ತೊಂದರೆಗಳಿಲ್ಲ ಎಂದು ಸ್ಪಸ್ಟಪಡಿಸಲಾಗಿದೆ. 

 

LEAVE A REPLY

Please enter your comment!
Please enter your name here