ಬಾಲಿವುಡ್ ನಟ ಅಮಿರ್ ಖಾನ್-ಕಿರಣ್ ರಾವ್ ತಮ್ಮ 15 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ, ವಿಚ್ಚೇದನ ಪಡೆದುಕೊಂಡಿದ್ದಾರೆ. ಇವರಿಬ್ಬರಿಗೆ ಆಜಾದ್ ಎಂಬ 10 ವರ್ಷದ ಪುತ್ರ ಇದ್ದಾನೆ.
2005 ರಲ್ಲಿ ಆಮಿರ್ ಖಾನ್ ಕಿರಣ್ ರಾವ್ ಅವರನ್ನು ಮದುವೆಯಾಗಿದ್ದರು. 2011 ರಲ್ಲಿ ಇವರಿಬ್ಬರಿಗೆ ಒಂದು ಗಂಡು ಮಗು ಜನಿಸಿತ್ತು. ಇವರ 15 ವರ್ಷಗಳ ದಾಂಪತ್ಯ ಜೀವನ ಇದೀಗ ಅಂತ್ಯವಾಗಿದ್ದು, ಈ ಕುರಿತಂತೆ ಅವರಿಬ್ಬರೂ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ವಿಚ್ಚೇದನ ಪಡೆದುಕೊಂಡಿದ್ದರೂ ಇವರಿಬ್ಬರೂ ಆಜಾದ್ ನ ಪಾಲಕರಾಗಿ ಮುಂದುವರೆಯುವ ನಿರ್ಧಾರ ಮಾಡಿದ್ದಾರೆ. ಇದಲ್ಲದೇ ಸಿನಿಮಾ ಮತ್ತು ಇತರ ಪ್ರಾಜೆಕ್ಟ್ ಗಳಲ್ಲಿ ಹಾಗೂ ಪಾನಿ ಪೌಂಡೇಶನ್ ಕೆಲಸಗಳನ್ನು ಇಬ್ಬರೂ ಜೊತೆಯಾಗಿ ನೋಡಿಕೊಳ್ಳಲಿದ್ದಾರೆ.
ಇದನ್ನೂ ಓದಿರಿ: ಜಿಯೋ ಬಳಕೆದಾರರಿಗೆ ಬಂಪರ್ ಆಫರ್: ತುರ್ತು ಡೇಟಾ ಸಾಲ ಸೌಲಭ್ಯ ಪ್ರಾರಂಭ
ಈ ಹಿಂದೆ ಅಮಿರ್ ಖಾನ್ ಅವರಿಗೆ 1986 ರಲ್ಲಿ ನಟಿ ರೀನಾ ದತ್ತ್ ಅವರೊಂದಿಗೆ ವಿವಾಹವಾಗಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ರೀನಾ ಅವರೇ ವಹಿಸಿಕೊಂಡಿದ್ದಾರೆ.