ಹೌದು .. ಇನ್ಮುಂದೆ ನೇಪಾಳ ಮತ್ತು ಭೂತಾನ ಪ್ರವಾಸಕ್ಕೆ ವೀಸಾ ಪಡೆಯುವ ಅಗತ್ಯವಿಲ್ಲ ಎಂದು ಕೇಂದ್ರ ಗೃಹ ಇಲಾಖೆ ಸ್ಪಷ್ಟಪಡಿಸಿದೆ. 15 ವರ್ಷ ಒಳಗಿನ ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟವರು ಪ್ರವಾಸ ಮಾಡುವುದಾದರೆ ದಾಖಲೆ ಪಾತ್ರವಾಗಿ ಆಧಾರ್ ಕಾರ್ಡನ್ನು ಬಳಕೆ ಮಾಡಬಹುದು

ನೇಪಾಳ ಮತ್ತು ಭೂತಾನ್ ಪ್ರವಾಸವನ್ನು ಮಾಡುವುದಾದರೆ ವೀಸಾ ಪಡೆಯುವ ಅಗತ್ಯವಿಲ್ಲ. ಪಾಸ್ ಪೋರ್ಟ್ ಜೊತೆಗೆ ಯಾವುದಾದರೂ ಸರಕಾರದಿಂದ ಮಾನ್ಯತೆ ಪಡೆದ ಗುರುತಿನ ಚೀಟಿಯನ್ನು ತೋರಿಸಿ ಹೋಗಬಹುದಾಗಿದೆ. ಆದರೆ ಈಗ 15 ವರ್ಷ ಒಳಗಿನ ಅಲ್ಲದೇ 65 ವರ್ಷ ಮೇಲ್ಪಟ್ಟವರಿಗೆ ಆಧಾರ್ ಸಹ ಗುರುತಿನ ದಾಖಲೆಯಾಗಿ ಲಭಿಸಿದೆ.

ಈ ಆದೇಶವನ್ನು ಹೊರಡಿಸಿರುವ ಕೇಂದ್ರ ಸರಕಾರ ಈ ಎರಡೂ ವರ್ಷಗಳ ಮಿತಿಯ ಒಳಗಿರುವವರ ಆಧಾರನ್ನು ದಾಖಲೆಯಾಗಿ ಪರಿಗಣಿಸುವಂತಿಲ್ಲ ಎಂದು ಸ್ಪಷ್ಟ ಪಡಿಸಿದೆ. ಈ ಸರಕಾರದ ಮಾನ್ಯತೆ ಪಡೆದ ದಾಖಲೆಗಳು ಎಂದರೆ, ಪಾನ್ ಕಾರ್ಡ್, ರೇಷನ್ ಕಾರ್ಡ್,  ಡ್ರೈವಿಂಗ್ ಲೈಸನ್ಸ್, ಇಲೆಕ್ಷನ್ ಕಾರ್ಡ್, ಕೇಂದ್ರ ಸರಕಾರದ ಆರೋಗ್ಯ ಸೇವಾ ಕಾರ್ಡ್ ಗಳನ್ನು ಬಳಸಬಹುದು.      

Image Copyright : google.com

LEAVE A REPLY

Please enter your comment!
Please enter your name here