ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮಹಾಮಾರಿ ತನ್ನ ಆಟವನ್ನು ಜೋರಾಗಿಯೇ ನಡೆಸಿದ್ದು, ಇಂದು ಬೆಂಗಳೂರು 5,012 ಸೇರಿ, ರಾಜ್ಯದಲ್ಲಿ 9,993 ಜನರಿಗೆ ಸೋಂಕು ಇರುವುದು ಖಚಿತವಾಗಿದೆ.
ರಾಜ್ಯದಲ್ಲಿ ಇಂದು 10,228 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದರೊಂದಿಗೆ ಇಲ್ಲಿಯವರೆಗೆ 5,33,074 ಜನರು ಗುಣಮುಖರಾದಂತೆ ಆಗಿದೆ. ಇದಲ್ಲದೆ ಕೋವಿಡ್ -19 ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 1,15,151 ಜನರು.
ಇದಲ್ಲದೆ ಇಂದು ಒಂದೇ ದಿನದಲ್ಲಿ ಬೆಂಗಳೂರು ನಗರದಲ್ಲಿ 24 ಸಾವಿನೊಂದಿಗೆ ರಾಜ್ಯದಲ್ಲಿ ಇಂದು 91 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖ್ಯೆಯು ತಿಳಿಸಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಇಲ್ಲಿಯವರೆಗೆ ಕೋವಿಡ್ ಸೋಂಕಿಗೆ 9,461 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿರಿ: ನಟಿ ಕಾಜಲ್ ಅಗರ್ವಾಲ್ ಮದುವೆಯಂತೆ.. ವರ ಯಾರು ಗೊತ್ತಾ?
ಇಂದು ಪತ್ತೆಯಾದ ಕೋವಿಡ್-19 ಸೋಂಕಿನಲ್ಲಿ ರಾಜ್ಯವಾರು ಸಂಖ್ಯೆಯನ್ನು ನೋಡುವುದಾದರೆ ಬೆಂಗಳೂರು ನಗರ 5012, ತುಮಕೂರು 475, ಮೈಸೂರು 373, ಚಿತ್ರದುರ್ಗ 332, ದಕ್ಷಿಣ ಕನ್ನಡ 272, ಬಳ್ಳಾರಿ 253, ಹಾಸನ 235, ಬೆಂಗಳೂರು ಗ್ರಾಮಾಂತರ 212, ದಾವಣಗೆರೆ 279, ಶಿವಮೊಗ್ಗ 224, ಉಡುಪಿ 224, ಮಂಡ್ಯ 197, ಬೆಳಗಾವಿ 153, ಚಿಕ್ಕಬಳ್ಳಾಪುರ 152, ಉತ್ತರ ಕನ್ನಡ 150, ಧಾರವಾಡ 126, ಚಿಕ್ಕಮಗಳೂರು 120, ಕಲಬುರಗಿ 103, ಕೋಲಾರ 161, ರಾಮನಗರ 111, ರಾಯಚೂರು 107, ಕೊಪ್ಪಳ 125, ಗದಗ 93, ಬಾಗಲಕೋಟೆ 84, ಕೊಡಗು 83, ಹಾವೇರಿ 81, ವಿಜಯಪುರ 80, ಚಾಮರಾಜನಗರ 79, ಯಾದಗಿರಿ 67, ಬೀದರ್ 30 ಪ್ರಕರಣಗಳು ದಾಖಲಾಗಿವೆ.
ಇಂದಿನ 06/10/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @MoHFW_INDIA @UNDP_India @WHOSEARO @UNICEFIndia @sriramulubjp @drashwathcn @BSBommaihttps://t.co/Y2yVAdAZr8 pic.twitter.com/YrsJlQAzJb
— K’taka Health Dept (@DHFWKA) October 6, 2020