99-test-positive-for-covid-19-in-karnataka

ಬೆಂಗಳೂರು: ರಾಜ್ಯದಲ್ಲಿ ಇಂದು ಕೋವಿಡ್-19 ಸೋಂಕಿಗೆ ಗುರಿಯಾದವರ ಸಂಖ್ಯೆಯು ದಾಖಲೆಯ ಪ್ರಮಾಣದಲ್ಲಿ ವರದಿಯಾಗಿದೆ. ಸಂಜೆಯ ಹೆಲ್ತ್ ಬುಲಿಟಿನ್ ಪ್ರಕಾರ ರಾಜ್ಯದಲ್ಲಿ ಇಂದು 99 ಪ್ರಕರಣಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1246 ರ ಗಡಿಯನ್ನು ತಲುಪಿದೆ. 

ಇಂದು (ಸೋಮವಾರ) ರಾಜ್ಯದ 18 ಜಿಲ್ಲೆಗಳಿಂದ ಸೊಂಕಿತರು ಪತ್ತೆಯಾಗಿದ್ದು, ಬೆಳಗ್ಗೆ 84 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದರೆ ಈಗ 15 ಪ್ರಕರಣಗಳು ದಾಖಲಾಗಿವೆ. ಜಿಲ್ಲಾವಾರು ಸೊಂಕಿತರನ್ನು ನೋಡುವುದಾದರೆ ಬೆಂಗಳೂರು ನಗರ 24, ಮಂಡ್ಯ 17, ಕಲಬುರಗಿ 10, ಉತ್ತರ ಕನ್ನಡ 9, ರಾಯಚೂರು 6, ಯಾದಗಿರಿ 6, ವಿಜಯಪುರ 5, ಗದಗ 5, ಹಾಸನ 4, ಕೊಪ್ಪಳ 3, ದಕ್ಷಿಣ ಕನ್ನಡ 2, ಬೆಳಗಾವಿ 2, ಮೈಸೂರು, ಬಳ್ಳಾರಿ, ಬೀದರ್, ಉಡುಪಿ, ದಾವಣಗೆರೆ, ಕೊಡಗು ಗಳಲ್ಲಿ ತಲಾ 1 ಪ್ರಕರಣಗಳು ಇಂದು ದಾಖಲಾಗಿವೆ.

ಇದನ್ನೂ ಓದಿರಿ: ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವಿಶೇಷ ಮಾಹಿತಿ

ಇಂದು ದಾಖಲಾದ ಪ್ರಕರಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇದ್ದು, ಆತಂಕವನ್ನು ಉಂಟುಮಾಡಿದೆ. ಇದರೊಂದಿಗೆ ಇಂದು 99 ಹೊಸ ಪ್ರಕರಣಗಳು ಕಂಡುಬಂದರೆ, 37 ಸೊಂಕಿತರು ಸಾವನ್ನಪ್ಪಿದ್ದಾರೆ. ಇವುಗಳ ನಡುವೆ ಸಂತೋಷದ ವಿಷಯವೆಂದರೆ 530 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.  

LEAVE A REPLY

Please enter your comment!
Please enter your name here