ಬೆಂಗಳೂರು: ರಾಜ್ಯದಲ್ಲಿ ಇಂದು ದಾಖಲೆಯ 9,894 ಕೊರೊನಾ ವೈರಸ್ ಪ್ರಖರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ 4.59 ಲಕ್ಷಕ್ಕೆ ಏರಿಕೆಯಾಗಿ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಇಂದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 3,479 ಪ್ರಕರಣಗಳು ಪತ್ತೆಯಾಗಿದ್ದು, 45 ಜನರು ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ ಬೆಂಗಳೂರಿನಲ್ಲಿ ಇಲ್ಲಿಯವರೆಗೆ 1,70,662 ಜನರು ಸೋಂಕಿಗೆ ಗುರಿಯಾದಂತಾಗಿದೆ.
ರಾಜ್ಯದಲ್ಲಿ ಇಂದು 8402 ಜನರು ಗುಣಮುಖರಾಗಿದ್ದು, ಇಲ್ಲಿಯವರೆಗೆ 3,52,958 ಜನರು ಗುಣಮುಖರಾದಂತಾಗಿದೆ. ಇಂದು ಬೆಂಗಳೂರಿನಲ್ಲಿ ಅತೀ ಹೆಚ್ಚು 45 ಜನ ಸೇರಿ ರಾಜ್ಯದಲ್ಲಿ 104 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ ಸೋಂಕಿನ ಸಕ್ರೀಯ 99,203 ಪ್ರಖರಣಗಳಿದ್ದು, ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.
ಸೋಂಕಿನ ತೀವ್ರತೆಗೆ ತುತ್ತಾಗಿ ಹಲವರು ಐಸಿಯು ಬಳಸಿಕೊಳ್ಳುತ್ತಿದ್ದು, ಅವರ ಸಂಖ್ಯೆ ರಾಜ್ಯದಲ್ಲಿ 807 ಆಗಿದೆ. ಇದರೊಂದಿಗೆ ರೋಗ ತಡೆಗೆ ಆರೋಗ್ಯ ಇಲಾಖೆಯು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಸೋಂಕಿಗೆ ಒಳಗಾಗುತ್ತಿರುವವರ ಸಂಖ್ಯೆಯೂ ಇಳಿಕೆಯಾಗಿದೆ.
ಬೆಂಗಳೂರು ನಗರ 3479, ಮೈಸೂರು 665, ಬಳ್ಳಾರಿ 661, ಹಾಸನ 426, ದಕ್ಷಿಣ ಕನ್ನಡ 404, ಬೆಳಗಾವಿ 318, ಶಿವಮೊಗ್ಗ 299, ತುಮಕೂರು 294, ಕೊಪ್ಪಳ 259, ಮಂಡ್ಯ 246, ಯಾದಗಿರಿ 235, ಚಿತ್ರದುರ್ಗ 232, ಬೆಂಗಳೂರು ಗ್ರಾಮಾಂತರ 216, ಕಲಬುರಗಿ 214, ಧಾರವಾಡ 199, ಗದಗ 198, ಹಾವೇರಿ 191, ರಾಯಚೂರು 190, ಚಿಕ್ಕಮಗಳೂರು 171, ಬಾಗಲಕೋಟೆ 165, ದಾವಣಗೆರೆ 144, ಉತ್ತರ ಕನ್ನಡ 141, ಉಡುಪಿ 126, ಚಿಕ್ಕಬಳ್ಳಾಪುರ 85, ಬೀದರ್ 82, ಚಾಮರಾಜನಗರ 80, ಕೋಲಾರ 73, ರಾಮನಗರ 38, ಕೊಡಗು 33, ವಿಜಯಪುರ 30 ಪ್ರಕರಣಗಳು ದಾಖಲಾಗಿವೆ.
ಇಂದಿನ 13/09/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @MoHFW_INDIA @UNDP_India @WHOSEARO @UNICEFIndia @sriramulubjp https://t.co/whfEUCiKiA pic.twitter.com/pNQcw5M28a
— K’taka Health Dept (@DHFWKA) September 13, 2020