ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಮತ್ತೆ ಹೆಚ್ಚಾಗುತ್ತಿದ್ದು, ಇಂದು 9,886 ಜನರಿಗೆ ಪಾಸಿಟಿವ್ ಬಂದಿದೆ. ಇದಲ್ಲದೆ ಬೆಂಗಳೂರು ಒಂದರಲ್ಲೇ 3,925 ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಇಂದು 8,989 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದು, ಇದರೊಂದಿಗೆ ಇಲ್ಲಿಯವರೆಗೆ ಕೋವಿಡ್ ಸೋಂಕಿನಿಂದ 5,08,495 ಜನರು ಗುಣಮುಖ ರಾಗಿದ್ದಾರೆ. ಇದಲ್ಲದೆ ರಾಜ್ಯದಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿ 100 ಜನರು ಸಾವನ್ನಪ್ಪಿದ್ದು, ಇಲ್ಲಿಯವರೆಗೆ ರಾಜ್ಯದಲ್ಲಿ 9,219 ಜನರು ಈ ಸೋಂಕಿಗೆ ಬಲಿಯಾದಂತಾಗಿದೆ.
ಬೆಂಗಳೂರು ನಗರದಲ್ಲಿ 3,925 ಸೋಂಕು ಪತ್ತೆಯಾಗಿದ್ದು, ಮೈಸೂರು 1514, ಹಾಸನ 460, ಶಿವಮೊಗ್ಗ 337, ತುಮಕೂರು 302, ದಕ್ಷಿಣ ಕನ್ನಡ 255, ಚಿಕ್ಕಬಳ್ಳಾಪುರ 234, ಮಂಡ್ಯ 206, ರಾಯಚೂರು 199, ಚಾಮರಾಜನಗರ 179, ಚಿಕ್ಕಮಗಳೂರು 175, ಉಡುಪಿ 158, ದಾವಣಗೆರೆ 129, ಯಾದಗಿರಿ 128, ಕಲಬುರಗಿ 107, ಧಾರವಾಡ 98, ಕೊಪ್ಪಳ 98, ವಿಜಯಪುರ 97, ಉತ್ತರ ಕನ್ನಡ 92, ಚಿತ್ರದುರ್ಗ 76, ಹಾವೇರಿ 71, ರಾಮನಗರ 58, ಕೊಡಗು 37, ಗದಗ 32, ಕೋಲಾರ 20 ಹಾಗೂ ಬೀದರ್ 14 ಸೋಂಕು ಪತ್ತೆಯಾಗಿವೆ.
ಇಂದಿನ 03/10/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @MoHFW_INDIA @UNDP_India @WHOSEARO @UNICEFIndia @sriramulubjp @drashwathcn @BSBommaihttps://t.co/SCQevrZEnB pic.twitter.com/avjoDZeP28
— K’taka Health Dept (@DHFWKA) October 3, 2020