ಬೆಂಗಳೂರು: ರಾಜ್ಯದಲ್ಲಿಂದು ಕೊರೋನಾ ಸೋಂಕು ನಿನ್ನೆಗಿಂತ ಕೊಂಚ ಪ್ರಮಾಣದ ಏರಿಕೆಯನ್ನು ಕಂಡಿದ್ದು, ಇಂದು 9785 ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಇದರೊಂದಿಗೆ 21614 ಜನರು ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ೨೪ ಗಂಟೆಗಳಲ್ಲಿ 2454 ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ ಇದರೊಂದಿಗೆ ಬೆಂಗಳೂರಿನ ಒಟ್ಟು ಸೋಂಕಿತರ ಸಂಖ್ಯೆ 11,95,340 ಕ್ಕೆ ಏರಿಕೆಯಾದಂತಾಗಿದೆ.
ರಾಜ್ಯದಲ್ಲಿ ಇಂದು 21614 ಜನರು ಗುಣಮುಖರಾಗಿದ್ದು, ಇನ್ನು 1,91,796 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ. ಕಳೆದ 24 ಗಂಟೆಯಲ್ಲಿ ಮಹಾಮಾರಿಗೆ 144 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 32,788ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿರಿ: ಹಾಟ್ ಹಾಟ್ ಲುಕ್ ನಲ್ಲಿ ಮಿಂಚಿದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ !
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ 70, ಬಳ್ಳಾರಿ 337, ಬೆಳಗಾವಿ 443, ಬೆಂಗಳೂರು ಗ್ರಾಮಾಂತರ 242, ಬೆಂಗಳೂರು ನಗರ 2454, ಬೀದರ್ 30, ಚಾಮರಾಜನಗರ 176, ಚಿಕ್ಕಬಳ್ಳಾಪುರ 273, ಚಿಕ್ಕಮಗಳೂರು 342, ಚಿತ್ರದುರ್ಗ 156, ದಕ್ಷಿಣ ಕನ್ನಡ 618, ದಾವಣಗೆರೆ 372, ಧಾರವಾಡ 212, ಗದಗ 60, ಹಾಸನ 624, ಹಾವೇರಿ 65, ಕಲಬುರಗಿ 60, ಕೊಡಗು 194, ಕೋಲಾರ 193, ಕೊಪ್ಪಳ 127, ಮಂಡ್ಯ 320, ಮೈಸೂರು 482, ರಾಯಚೂರು 59, ರಾಮನಗರ 32, ಶಿವಮೊಗ್ಗ 715, ತುಮಕೂರು 440, ಉಡುಪಿ 263, ಉತ್ತರ ಕನ್ನಡ 229, ವಿಜಯಪುರ 188, ಯಾದಗಿರಿ 9 ಪ್ರಕರಣಗಳು ದಾಖಲಾಗಿವೆ
ಇಂದಿನ 12/06/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/1bvIUGYsD3 @CMofKarnataka @drashwathcn@GovindKarjol @LaxmanSavadi @mla_sudhakar @BBMPCOMM @DC_Dharwad @DCKodagu @dcudupi @DCDK9 @mysurucitycorp @mangalurucorp @CEOUdupi pic.twitter.com/4Vq998rzBJ
— K’taka Health Dept (@DHFWKA) June 12, 2021