covid-19-378-new-cases-in-karnataka

ಬೆಂಗಳೂರು (ಜೂ.30): ರಾಜ್ಯದಲ್ಲಿ ಇಂದು 947 ಮಂದಿಗೆ ಸೋಂಕು ದೃಡವಾಗಿದ್ದು, ಈ ಮೂಲಕ  ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 15,242 ಕ್ಕೆ ಏರಿಕೆಯಾದಂತಾಗಿದೆ. ಇದರೊಂದಿಗೆ ಬರೋಬ್ಬರಿ 20 ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಜನರಲ್ಲಿ  ಆತಂಕವನ್ನು ಹೆಚ್ಚಿಸಿದೆ.ಇಂದು ಒಂದೇ ದಿನ 947 ಮಂದಿಗೆ ಕೊರೊನ ಕಾಣಿಸಿಕೊಂಡಿದೆ.

ಬೆಂಗಳೂರಿನ ಪರಿಸ್ಥಿತಿಯು ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಬೆಂಗಳೂರಿನಲ್ಲಿ ಇಂದು 503 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ 4 ಜನರು ಬೆಂಗಳೂರು ನಗರದಲ್ಲಿ ಮರಣಹೊಂದಿದ್ದಾರೆ.

ಇನ್ನು ಜಿಲ್ಲಾವಾರು ಸೋಂಕಿತರ ಸಂಖ್ಯೆಯನ್ನು ನೋಡುವುದಾದರೆ ಬೆಂಗಳೂರು ನಗರ-503, ಬಳ್ಳಾರಿ-61, ಹಾವೇರಿ-49, ದಕ್ಷಿಣ ಕನ್ನಡ -44, ಉತ್ತರ ಕನ್ನಡ-40, ವಿಜಯಪುರ-39, ಶಿವಮೊಗ್ಗ-22, ಬೆಂಗಳೂರು ಗ್ರಾಮಾಂತರ-21, ಬೀದರ್ -17, ಧಾರವಾಡ-17, ಹಾಸನ-16, ಕಲಬುರಗಿ-15, ರಾಯಚೂರು-15, ಚಿಕ್ಕಬಳ್ಳಾಪುರ-13, ದಾವಣಗೆರೆ-12, ರಾಮನಗರ-12, ಚಿಕ್ಕಮಗಳೂರು-10, ಉಡುಪಿ-9, ಮೈಸೂರು-9, ಬಾಗಲಕೋಟೆ-4, ಕೊಡಗು-4, ಕೋಲಾರ-3, ಚಿತ್ರದುರ್ಗ-3, ಯಾದಗಿರಿ-2, ಮಂಡ್ಯ-2, ಬೆಳಗಾವಿ -2, ಗದಗ-2, ತುಮಕೂರು-1 ಸೋಂಕಿತರು ದಾಖಲಾಗಿದ್ದಾರೆ.

ಇಂದಿನ ಸಾವಿನ ಸಂಖ್ಯೆ 20 ಕ್ಕೆ ಏರಿಕೆಯನ್ನು ಕಂಡಿದ್ದು, ಬಳ್ಳಾರಿ 6, ಬೆಂಗಳೂರು ನಗರ 4, ಹಾವೇರಿ 2, ವಿಜಯಪುರ 2, ಧಾರವಾಡ 2, ಕೋಲಾರ 1, ದಾವಣಗೆರೆ 1, ಬೆಳಗಾವಿ 1, ಮೈಸೂರು 1 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ರಿಪೋರ್ಟ್ ತಿಳಿಸಿದೆ.

ಇಂದು 235 ಜನರು ಗುಣಮುಖರಾಗಿ ಮನೆಗೆ ತೆರಳಿದ್ದು, ಇದರೊಂದಿಗೆ 7,918 ಜನರು ಗುಣಮುಖರಾದಂತಾಗಿದೆ. ಇನ್ನು ವಿವಿಧ ಆಸ್ಪತ್ರೆಗಳಲ್ಲಿ 7074 ಜನರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಇದರೊಂದಿಗೆ ಐಸಿಯುನಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುವವರ ಸಂಖ್ಯೆ 271 ಕ್ಕೆ ಏರಿಕೆಯಾಗಿದೆ.

LEAVE A REPLY

Please enter your comment!
Please enter your name here