9366-new-covid-19-cases-found-in-karnataka

ಬೆಂಗಳೂರು: ಕೊರೊನಾ ತನ್ನ ಪ್ರವೃತ್ತಿಯನ್ನು ಮುಂದುವರೆಸಿದ್ದು, ಬೆಂಗಳೂರಿನಲ್ಲಿ ಅತೀ ಹೆಚ್ಚು ಅಂದರೆ 3,799 ಪ್ರಖರಣಗಳು ಕಾಣಿಸಿಕೊಂಡಿವೆ. ಇದರೊಂದಿಗೆ ರಾಜ್ಯದಲ್ಲಿ ಇಂದು 9,366 ಮಂದಿಗೆ ಕೊರೊನಾ ಸೋಂಕು ಇರುವುದು ದೃಡಪಟ್ಟಿದೆ. ಇದಲ್ಲದೇ ರಾಜ್ಯದಲ್ಲಿ ಸೋಂಕಿನ ತೀವ್ರತೆಯಿಂದಾಗಿ 93 ಜನರು ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ 3,799 ಕೊರೊನಾ ಹೊಸ ಪ್ರಖರಣಗಳು ಪತ್ತೆಯಾಗಿದ್ದರೆ, 2,184 ಜನರು ಇಂದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದಲ್ಲದೇ ಬೆಂಗಳೂರೊಂದರಲ್ಲೇ 24 ಜನರು ಸಾವನ್ನಪ್ಪಿದ್ದು, ಜನತೆಯಲ್ಲಿ ಆತಂಕವನ್ನು ಉಂಟುಮಾಡಿದೆ. ಇಲ್ಲಿಯವೆರೆಗೆ ಬೆಂಗಳೂರಿನಲ್ಲಿ ಒಟ್ಟು 1,84,082 ಜನರು ಸೋಂಕಿಗೆ ಒಳಗಾಗಿದ್ದಾರೆ.

ಇನ್ನು ಜಿಲ್ಲಾವಾರು ಸೋಂಕಿತರ ಸಂಖ್ಯೆಯನ್ನು ನೋಡುವುದಾದರೆ, ಬೆಂಗಳೂರು ನಗರ 3799, ಬಳ್ಳಾರಿ 677, ಮೈಸೂರು 591, ತುಮಕೂರು 381, ದಕ್ಷಿಣ ಕನ್ನಡ 308, ಬೆಳಗಾವಿ 295, ದಾವಣಗೆರೆ 257, ಧಾರವಾಡ 247, ಬಾಗಲಕೋಟೆ 234, ರಾಯಚೂರು 227, ಶಿವಮೊಗ್ಗ 218, ಹಾಸನ 206, ಹಾವೇರಿ 188, ಕೊಪ್ಪಳ 180, ಕಲಬುರಗಿ 175,  ಚಿತ್ರದುರ್ಗ 152, ಉತ್ತರ ಕನ್ನಡ 127, ಉಡುಪಿ 120, ಕೋಲಾರ 115, ಚಿಕ್ಕಮಗಳೂರು 112, ವಿಜಯಪುರ 107, ಚಿಕ್ಕಬಳ್ಳಾಪುರ 102, ಚಾಮರಾಜನಗರ 108, ಮಂಡ್ಯ 86, ಬೀದರ್ 80, ಗದಗ 69, ಬೆಂಗಳೂರು ಗ್ರಾಮಾಂತರ 66, ಯಾದಗಿರಿ 50, ಕೊಡಗು 47, ರಾಮನಗರ 42, ಪ್ರಕರಣಗಳು ದಾಖಲಾಗಿವೆ.

LEAVE A REPLY

Please enter your comment!
Please enter your name here