ಬೆಂಗಳೂರು: ರಾಜ್ಯದಲ್ಲಿ ಕೊರೋನಾ ತನ್ನ ಕ್ರೂರತೆಯನ್ನು ಮುಂದುವರೆಸಿದ್ದು, ಇಂದು ಒಂದೇ ದಿನದಲ್ಲಿ 9,265 ಜನರಲ್ಲಿ ಪತ್ತೆಯಾಗಿದೆ. ಇದರೊಂದಿಗೆ ಬೆಂಗಳೂರು ಮಹಾನಗರದಲ್ಲಿಯೂ ಸೋಂಕಿನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದು, ಇಂದು 4,574 ಪ್ರಕರಣಗಳು ಪತ್ತೆಯಾಗಿವೆ.
ರಾಜ್ಯದಲ್ಲಿ ಚೇತರಿಕೆಯ ಪ್ರಮಾಣವು ಏರಿಕೆಯಾಗಿದ್ದು, ಇಂದು 8,662 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ 6,11,167 ಜನರು ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ. ಇನ್ನು ಕೋವಿಡ್ ಸೋಂಕಿನಿಂದ 1,13,987 ಜನರು ಬಳಲುತ್ತಿದ್ದು, ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯದಲ್ಲಿ ಇಂದು ಕೋವಿಡ್ ನಿಂದ 75 ಜನರು ಸಾವನ್ನಪ್ಪಿದ್ದು, ಬೆಂಗಳೂರಿನಲ್ಲಿ ಅತೀ ಹೆಚ್ಚು 27 ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯವರೆಗೆ ಸಾವನ್ನಪ್ಪಿದವರ ಸಂಖ್ಯೆ 10,198 ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿರಿ: ಲಡಾಕ್ ಗಡಿಯಲ್ಲಿ ಚೀನಿ ಸೈನಿಕರಿಗೆ ಚಳಿಯ ಹೊಡೆತ : 5000 ಕ್ಕೂ ಹೆಚ್ಚು ಸೈನಿಕರು ಆಸ್ಪತ್ರೆಗೆ
ರಾಜ್ಯದಲ್ಲಿ ದಾಖಲಾದ ಪ್ರಕರಣಗಳಲ್ಲಿ ಜಿಲ್ಲಾವಾರು ಮಾಹಿತಿಯನ್ನು ನೋಡುತ್ತಾ ಸಾಗಿದರೆ, ಬೆಂಗಳೂರು ನಗರ 4574, ಮೈಸೂರು 641, ಬೆಂಗಳೂರು ಗ್ರಾಮಾಂತರ 344, ತುಮಕೂರು 341, ಬೆಳಗಾವಿ 297, ದಕ್ಷಿಣ ಕನ್ನಡ 292, ಬಳ್ಳಾರಿ 275, ಹಾಸನ 227, ಮಂಡ್ಯ 212, ಉಡುಪಿ 199, ಉತ್ತರ ಕನ್ನಡ 192, ಚಿತ್ರದುರ್ಗ 162, ಕೊಡಗು 160, ಬಾಗಲಕೋಟೆ 158, ಚಿಕ್ಕಬಳ್ಳಾಪುರ 137, ಧಾರವಾಡ 136, ವಿಜಯಪುರ 128, ಚಿಕ್ಕಮಗಳೂರು 97, ಚಾಮರಾಜನಗರ 97, ಕೋಲಾರ 93, ಶಿವಮೊಗ್ಗ 83, ದಾವಣಗೆರೆ 82, ಹಾವೇರಿ 66, ಕೊಪ್ಪಳ 60, ರಾಯಚೂರು 44, ರಾಮನಗರ 42, ಗದಗ 41, ಕಲಬುರಗಿ 39, ಯಾದಗಿರಿ 27, ಬೀದರ್ 19 ಪ್ರಕರಣಗಳು ದಾಖಲಾಗಿವೆ.
ಇಂದಿನ 14/10/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @MoHFW_INDIA @UNDP_India @WHOSEARO @UNICEFIndia @sriramulubjp @drashwathcn @BSBommaihttps://t.co/K3DhGIBjeA pic.twitter.com/uLDngLPeJc
— K’taka Health Dept (@DHFWKA) October 14, 2020