ಕೊರೋನಾಘಾತ: ಬೆಂಗಳೂರಿನಲ್ಲಿ 3,552 ಸೇರಿದಂತೆ ರಾಜ್ಯದಲ್ಲಿ 9,140 ಮಂದಿಗೆ ಪಾಸಿಟಿವ್ !

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದ್ದು, ಇಂದು ಒಂದೇ ದಿನದಲ್ಲಿ 9,140 ಮಂದಿಗೆ ಪಾಸಿಟಿವ್ ಬಂದಿದೆ. ಆದರೆ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚಿದ್ದು, ಸಮಾಧಾನ ತಂದಿದೆ. ಇಂದು ರಾಜ್ಯದಲ್ಲಿ 9,557 ಜನರು ಗುಣಮುಖರಾಗಿದ್ದಾರೆ.

ಬೆಂಗಳೂರು ನಗರದಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದ್ದು, 24 ಗಂಟೆಯಲ್ಲಿ 3,552 ಜನರಿಗೆ ಸೋಂಕು ವಕ್ಕರಿಸಿದೆ. ಇದಲ್ಲದೇ 21 ಜನರು  ಬೆಂಗಳುರೊಂದರಲ್ಲೇ ಸೋಂಕಿನಿಂದಾಗಿ ಮರಣ ಹೊಂದಿದ್ದಾರೆ. ಇನ್ನು ಗುಣಮುಖರಾದವರ ಸಂಖ್ಯೆಯೂ ಏರಿಕೆಯನ್ನು ಕಂಡಿದ್ದು, ಇಂದು ಒಂದೇ ದಿನ 3,538 ಜನರು ಗುಣವಾಗಿದ್ದಾರೆ.

ರಾಜ್ಯದಲ್ಲಿ ಇಲ್ಲಿಯವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 4,49,551 ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಇಲ್ಲಿಯವರೆಗೆ ಗುಣಮುಖರಾದವರು 3,44,556 ಜನರಾಗಿದ್ದಾರೆ. ಇನ್ನು ಸೋಂಕಿನಿಂದ ಇಲ್ಲಿಯವರೆಗೆ 7,161 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಇನ್ನು ಜಿಲ್ಲಾವಾರು ಮಾಹಿತಿಯನ್ನು ನೋಡುವುದಾದರೆ ಬೆಂಗಳೂರು ನಗರ 3552, ಮೈಸೂರು 637, ದಕ್ಷಿಣ ಕನ್ನಡ 401, ಬಳ್ಳಾರಿ 366, ಹಾಸನ 324, ತುಮಕೂರು 304, ದಾವಣಗೆರೆ 267, ಧಾರವಾಡ 239, ಚಿತ್ರದುರ್ಗ 227, ಕಲಬುರಗಿ 222, ಹಾವೇರಿ 213, ಬೆಂಗಳೂರು ಗ್ರಾಮಾಂತರ 211, ಬೆಳಗಾವಿ 201, ಮಂಡ್ಯ 193, ಕೊಪ್ಪಳ 183, ಬಾಗಲಕೋಟೆ 175, ಉಡುಪಿ  169, ಚಿಕ್ಕಮಗಳೂರು 159, ಶಿವಮೊಗ್ಗ 155, ಯಾದಗಿರಿ 151, ರಾಯಚೂರು 131, ಉತ್ತರ ಕನ್ನಡ 130, ಬೀದರ್ 101, ಚಿಕ್ಕಬಳ್ಳಾಪುರ 101, ರಾಮನಗರ 81, ಚಾಮರಾಜನಗರ 60, ವಿಜಯಪುರ 58, ಕೋಲಾರ 53, ಗದಗ 49, ಕೊಡಗು 27 ಪ್ರಕರಣಗಳು ದಾಖಲಾಗಿವೆ.

9/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @MoHFW_INDIA @UNDP_India @WHOSEARO @UNICEFIndia @sriramulubjp @drashwathcn @BSBommaihttps://t.co/blIS832vkL pic.twitter.com/xOrXgI8p1Y

LEAVE A REPLY

Please enter your comment!
Please enter your name here