8856-new-corona-cases-found-in-karnataka

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಆರ್ಭಟ ಮುಂದುವರೆದಿದ್ದು, ಇಂದು 24 ಗಂಟೆಗಳಲ್ಲಿ 8,856 ಸೋಂಕಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು ಸೋಂಕಿತರ ಸಂಖ್ಯೆ 6,01,767 ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದು 4,226 ಕೊರೋನಾ ಸೋಂಕು ಪತ್ತೆಯಾಗಿದ್ದು, ಇಂದು 3,667 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಬೆಂಗಳೂರೊಂದರಲ್ಲೇ ಕೊರೋನಾ ಮಹಾಮಾರಿಗೆ 24 ಜನರು ಪ್ರಾಣವನ್ನು ಬಿಟ್ಟುದ್ದು, ಒಟ್ಟಾರೆಯಾಗಿ ರಾಜ್ಯದಲ್ಲಿ ಇಂದು 87 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದನ್ನು ಓದಿರಿ: ಮಾಸ್ಕ್ ಧರಿಸದಿದ್ದರೆ ಇನ್ಮುಂದೆ ದಂಡ ಗ್ಯಾರಂಟಿ: ಡಾ. ಸುಧಾಕರ್ ಹೇಳಿದ್ದೇನು ನೋಡೋಣ ಬನ್ನಿ

ಇಂದು ಪತ್ತೆಯಾದ ಸೋಂಕಿತರಲ್ಲಿ ಜಿಲ್ಲಾವಾರು ಸಂಖ್ಯೆಯನ್ನು ನೋಡುವುದಾದರೆ ಬೆಂಗಳೂರು ನಗರ 4,226, ಮೈಸೂರು 564, ಹಾಸನ 446, ತುಮಕೂರು 362, ಶಿವಮೊಗ್ಗ 248, ಮಂಡ್ಯ 244, ಬೆಳಗಾವಿ 243, ದಕ್ಷಿಣ ಕನ್ನಡ 240, ಬೆಂಗಳೂರು ಗ್ರಾಮಾಂತರ 188, ಚಿತ್ರದುರ್ಗ 180, ದಾವಣಗೆರೆ 173, ಚಿಕ್ಕಮಗಳೂರು 167, ಉತ್ತರಕನ್ನಡ 146, ಉಡುಪಿ 139, ಹಾವೇರಿ 134, ಧಾರವಾಡ 128, ಬಳ್ಳಾರಿ 109, ಕಲಬುರಗಿ 97, ಕೊಡಗು 96, ರಾಯಚೂರು 93, ಚಿಕ್ಕಬಳ್ಳಾಪುರ 89, ಕೊಪ್ಪಳ 87, ವಿಜಯಪುರ 80, ಕೋಲಾರ 78, ಗದಗ 67, ಯಾದಗಿರಿ 59, ಬಾಗಲಕೋಟೆ 51, ಚಾಮರಾಜನಗರ 50, ರಾಮನಗರ 44, ಬೀದರ್ 28 ಪ್ರಕರಣಗಳು ದಾಖಲಾಗಿವೆ.

LEAVE A REPLY

Please enter your comment!
Please enter your name here