ಬೆಂಗಳೂರು: ಕರ್ನಾಟಕದಲ್ಲಿ ಇಂದು ದಾಖಲೆಯ ಪ್ರಮಾಣದಲ್ಲಿ ಸೋಂಕು ಪತ್ತೆಯಾಗುವ ಮೂಲಕ ಆತಂಕವನ್ನು ಹೆಚ್ಚಿಸಿದೆ. ಇಂದು ಒಂದೇ ದಿನದಲ್ಲಿ 8,818 ಪ್ರಕರಣ ಪತ್ತೆಯಾಗುವ ಮೂಲಕ ಒಟ್ಟು ರಾಜ್ಯದ ಸೋಂಕಿತರ ಸಂಖ್ಯೆ 2.19 ಲಕ್ಷ ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಇಂದು ಗುಣಮುಖರಾಗಿ ಮನೆಗೆ ತೆರಳಿದವರು 6,629 ಜನರು. ಇದರೊಂದಿಗೆ ಇಲ್ಲಿಯವರೆಗೆ 1,34,811 ಜನರಿಗೆ ಕೊರೊನಾ ಸೋಂಕು ಗುಣವಾದಂತಾಗಿದೆ.
ಆದರೆ ಬೇಸರದ ಸಂಗತಿಯೆಂದರೆ ಇಂದು ರಾಜ್ಯದಲ್ಲಿ 114 ಜನರು ಕಾರೋನಾ ಕಾರಣಗಳಿಂದಾಗಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದೆ. ಸೋಂಕಿನ ಬೀಕರತೆಯನ್ನು ತಡೆಯಲಾಗದೆ ಮತ್ತು ಮೊದಲಿನಿಂದಲೇ ಹಲವಾರು ಆರೋಗ್ಯ ಸಮಸ್ಯೆ ಇರುವವರು ಸೋಂಕು ತಗುಲಿದಾಗ ಚೇತರಿಸಿಕೊಳ್ಳಲು ಸ್ವಲ್ಪ ಸಮಸ್ಯೆಯಾಗುತ್ತದೆ. ಇಂತಹ ಸುಮಾರು 716 ಜನರು ಐಸಿಯುನಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.
ಇಂದಿನ 15/08/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @sriramulubjp @drashwathcn @BSBommai @mla_sudhakar @iaspankajpandey @Tejasvi_Surya @BBMP_MAYOR @BBMPCOMMhttps://t.co/pZvOjoaHs7 pic.twitter.com/KyRWaMXNLh
— K’taka Health Dept (@DHFWKA) August 15, 2020